ಮುಂಬೈ, ಅ. 25(DaijiworldNews/ TA): ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಒಡಿಐ ವಿಶ್ವಕಪ್ 2025 ರಲ್ಲಿ ಪಾಕಿಸ್ತಾನ ತಂಡ ನಿರಾಸಾಜನಕ ಪ್ರದರ್ಶನ ತೋರಿಸಿದೆ. ಫಾತಿಮಾ ಸನಾ ನಾಯಕತ್ವದ ಪಾಕಿಸ್ತಾನ ತಂಡ ಲೀಗ್ ಹಂತದಿಂದಲೇ ಹೊರಬಿದ್ದು, ಏಳು ಪಂದ್ಯಗಳಲ್ಲಿ ಒಂದನ್ನೂ ಗೆಲ್ಲದೆ ಟೂರ್ನಿಯಿಂದ ಔಟ್ ಆಗಿದೆ.

ಅಕ್ಟೋಬರ್ 24ರಂದು ಕೊಲಂಬೊದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಕೊನೆಯ ಲೀಗ್ ಪಂದ್ಯವು ಕೇವಲ 4.2 ಓವರ್ಗಳ ಬಳಿಕ ಮಳೆಯಿಂದ ರದ್ದು ಮಾಡಲ್ಪಟ್ಟಿದೆ. ಮೊದಲ ಬ್ಯಾಟಿಂಗ್ನಲ್ಲಿ ಪಾಕಿಸ್ತಾನ 18 ರನ್ ಗಳಿಸಿತ್ತು. ಈ ರದ್ದುಗೊಂಡ ಪಂದ್ಯದಿಂದಲೂ ಪಾಕಿಸ್ತಾನ ತಂಡಕ್ಕೆ ಯಾವುದೇ ಗೆಲುವಿನ ಅವಕಾಶ ಸಿಕ್ಕಿಲ್ಲ.
ಈ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಏಳು ಪಂದ್ಯಗಳಲ್ಲಿ ನಾಲ್ಕನ್ನು ಸೋತಿದ್ದು, ಮಳೆಯಿಂದ ಮೂರು ಪಂದ್ಯಗಳು ರದ್ದಾಗಿದ್ದುದರಿಂದ ಪಾಕಿಸ್ತಾನ 7ನೇ ಸ್ಥಾನಕ್ಕೆ ತಲುಪಿತು. ಏಕದಿನ ವಿಶ್ವಕಪ್ಗಾಗಿ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿರುವುದರಿಂದ, ಪಾಕಿಸ್ತಾನ ತಂಡದ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಆಡಬೇಕಾಯಿತು. ಆರಂಭದಲ್ಲಿ ಬಾಂಗ್ಲಾದೇಶ ವಿರುದ್ಧ ಸೋತಿದ್ದ ತಂಡ, ನಂತರ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧವೂ ಸೋಲು ಅನುಭವಿಸಿತು.
ಈ ಮೂಲಕ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡ ಐಸಿಸಿ ಮಹಿಳಾ ವಿಶ್ವಕಪ್ 2025 ರಲ್ಲಿ ನಿರಾಸಾಜನಕ ಪ್ರದರ್ಶನದೊಂದಿಗೆ ಟೂರ್ನಿಯಿಂದ ಹೊರಬಂದಿದೆ.