ಲಂಡನ್, ಜು 08 (DaijiworldNews/SM): ವಿಶ್ವಕಪ್ ನಲ್ಲಿ 9 ಲೀಗ್ ಪಂದ್ಯಗಳ ಪೈಕಿ ಒಂದೇಒಂದು ಪಂದ್ಯ ಮಾತ್ರ ಸೋತಿರುವ ಟೀಂ ಇಂಡಿಯಾ ಅಂತಿಮ ನಾಲ್ಕರ ಘಟ್ಟಕ್ಕೆ ಬಂದು ತಲುಪಿದೆ. ಜುಲೈ 9ರಂದು ಹರಿಣರ ವಿರುದ್ಧ ಸೆಮಿಫೈನಲ್ ನಲ್ಲಿ ಹೋರಾಟ ನಡೆಸಲಿದೆ. ಕಳೆದ 2015ರ ವಿಶ್ವಕಪ್ ನಲ್ಲಿ ಉಭಯ ತಂಡಗಳು ಸೆಮಿಫನಲ್ ನಲ್ಲಿ ಮುಖಾಮುಖಿಯಾಗಿದ್ದವು. ಅಲ್ಲಿ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ಗೆ ಶರಣಾಗಿತ್ತು.
ಆದರೆ, ಇದೀಗ ಮತ್ತೆ ಅದೇ ಆತಂಕ ಎದುರಾಗಿದೆ. ಆದರೆ, ಈ ಬಾರಿ ಟೀಂ ಇಂಡಿಯಾ ಆಟಗಾರರು ಫಾರ್ಮ್ ನಲ್ಲಿರುವ ಕಾರಣದಿಂದಾಗಿ ಕಪ್ ಗೆಲ್ಲುತ್ತೆ ಎನ್ನುವ ವಿಶ್ವಾಸ ಭಾರತಿಯಲ್ಲಿದೆ. ಪ್ರಸ್ತುತ ಟೀಂ ಇಂಡಿಯಾದಲ್ಲಿ ಆಟಗಾರರೆಲ್ಲ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆರಂಭಿಕ ಹಿಟ್ ಮ್ಯಾನ್ ರೋಹಿತ್ ಶರ್ಮಾ, ಲೋಕೇಶ್ ರಾಹುಲ್, ನಾಯಕ ವಿರಾಟ್, ಪಂಡ್ಯಾ, ಧೋನಿ ಪ್ರಮುಖ ಬ್ಯಾಟ್ಸ್ ಮನ್ ಗಳ ಸಾಲಿನಲ್ಲಿ ಬರುತ್ತಾರೆ. ಇನ್ನುಳಿದಂತೆ ಮಹಮ್ಮದ್ ಶಮಿ, ಜಸ್ಪ್ರಿತ್ ಬುಮ್ರಾ, ಚಾಹಲ್ ಪ್ರಮುಖ ಬೌಲರ್ ಗಳಾಗಿದ್ದಾರೆ.
ಈಗಾಗಲೇ ರೋಹಿತ್ ಶರ್ಮ ಈ ವಿಶ್ವಕಪ್ ಟೂರ್ನಿಯಲ್ಲಿ ಮಿಂಚಿದ್ದಾರೆ. ಭರ್ಜರಿಯಾಗಿ 5 ಶತಕಗಳನ್ನು ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ. ಉಪ ನಾಯಕನ ಮೇಲೆ ಮುಂದಿನ ಪಂದ್ಯಗಳಲ್ಲಿ ಕ್ರಿಕೆಟ್ ಪ್ರೇಮಿಗಳು ಭರವಸೆಯನ್ನು ಇಟ್ಟುಕೊಂಡಿದ್ದಾರೆ.
ಇನ್ನು ನ್ಯೂಜಿಲ್ಯಾಂಡ್ ತಂಡದಲ್ಲಿ ಕೇನ್ ವಿಲಿಯಮ್ಸನ್, ರಾಸ್ ಟೇಲರ್, ಜೇಮ್ ನಿಶಮ್ ಪ್ರಮುಖ ದಾಂಡಿಗರಾಗಿದ್ದಾರೆ. ಇನ್ನು ಲೂಕಿ ಫರ್ಗ್ಯುಸನ್, ಟ್ರೆಂಟ್ ಬೌಲ್ಟ್, ಜೇಮ್ ನಿಶಮ್ ಪ್ರಮುಖ ಎಸೆತಗಾರರಾಗಿದ್ದಾರೆ. ಇವರ ಪೈಕಿ ಜೆಮ್ ನಿಶಮ್ ಆಲ್ ರೌಂಡರ್ ಪ್ರದರ್ಶನ ನೀಡುತ್ತಿದ್ದಾರೆ.
ಸದ್ಯ ಸೆಮಿಯಲ್ಲಿ ಆಡುವ ಈ ಎರಡೂ ತಂಡಗಳು ಬಲಿಷ್ಟವಾಗಿವೆ. ಆದರೆ, ಟೀಂ ಇಂಡಿಯಾ ಸದ್ಯ ಅಗ್ರಸ್ಥಾನದಲ್ಲಿದೆ. ಸೆಮಿಪಂದ್ಯವನ್ನು ಗೆಲ್ಲುವುದು ಅಷ್ಟೊಂದು ಸುಲಭದ ಮಾತಲ್ಲದಿದ್ದರೂ ನಿರೀಕ್ಷೆ ಮಾತ್ರ ಬೆಟ್ಟದಷ್ಟಿದೆ. ಅತಿಯಾದ ಆತ್ಮ ವಿಶ್ವಾಸವನ್ನು ಹೊಂದದೆ, ಪ್ರಾಮಾಣಿಕ ಪ್ರಯತ್ನದೊಂದಿಗೆ ಹೋರಾಡಿದರೆ, ಟೀಂ ಇಂಡಿಯಾ ಮತ್ತೊಮ್ಮೆ ವಿಶ್ವ ಗೆಲ್ಲಲಿದೆ.