ನವದೆಹಲಿ, ಜು 11 (DaijiworldNews/SM): 2019ರ ವಿಶ್ವಕಪ್ ನ ಅಧಿಕ ಪಂದ್ಯವನ್ನು ಗೆದ್ದಿದ್ದು ಮಳೆರಾಯ. ಎಷ್ಟರ ಮಟ್ಟಿಗಂದರೆ, ಮೊದಲ ಸೆಮಿಫೈನಲ್ ಪಂದ್ಯಕ್ಕೂ ಇದೇ ಮಳೆ ಅಡ್ಡಿಯನ್ನುಂಟು ಮಾಡಿತ್ತು. ಒಂದು ಹಂತದಲ್ಲಿ ಭಾರತದ ಸೋಲಿಗೆ ಮಳೆರಾಯನ ಎಂಟ್ರಿಯೇ ಕಾರಣವೂ ಹೌದು ಎಂಬುವುದಾಗಿ ಚರ್ಚೆಗಳು ನಡೆಯುತ್ತಿವೆ.
ಮೊದಲ ಸೆಮಿ ಫೈನಲ್ ಪಂದ್ಯವನ್ನು ಮಂಗಳವಾರ ಮುಂದುವರಿಸುವುದಾ ಅಥವಾ ಡಕ್ ವರ್ಥ್ ನಿಯಮ ಅಳವಡಿಸುವುದಾ ಎಂಬ ಬಗ್ಗೆ ಸೋಮವಾರದಂದು ಚರ್ಚೆ ನಡೆದಿತ್ತು. ಈ ವೇಳೆ ಖ್ಯಾತ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಈ ವಿಚಾರಕ್ಕೆ ಟ್ವೀಟ್ ಮಾಡಿದ್ದಾರೆ. ಹಾಗೂ ಡಕ್ ವರ್ಥ್ ನಿಯಮವನ್ನು ವ್ಯಂಗ್ಯವಾಡಿದ್ದಾರೆ.
“ಮಳೆಗಾಲದ ವೇಳೆ ವೇತನವನ್ನು ಡಕ್ವರ್ಥ್ ನಿಯಮ ಪ್ರಕಾರ ಅಳವಡಿಸುವುದಾದರೆ ಕಚೇರಿಗೆ ಬರುವ ನೌಕರರಿಗೆ ಲಾಭವಾಗಲಿದೆ. ಆವಾಗ ಮಾನವ ಸಂಪನ್ಮೂಲ ಅಧಿಕಾರಿಗಳು ಏನು ಯೋಚನೆ ಮಾಡುತ್ತಾರೆ?’ ಎಂದು ಪ್ರಕಟಿಸಿದ್ದರು. ಇದಕ್ಕೆ ಭಾರೀ ಸಂಖ್ಯೆಯಲ್ಲಿ ಪ್ರತಿಕ್ರಿಯೆ ಬಂದಿದೆ. ಒಂದು ಅರ್ಥದಲ್ಲಿ ಶ್ರಮ ವಹಿಸಿ ದುಡಿಯದೇ ವೇತನ ಗಳಿಸುವುದು ಎಂಬ ಅರ್ಥವೂ ಕೂಡ ಇದರಲ್ಲಿ ಅಡಕವಾಗಿದೆ.