ಲಂಡನ್, ಜು 19 (DaijiworldNews/SM): ಜಿಂಬ್ವಾಬೆ ಕ್ರಿಕೆಟ್ ತಂಡವನ್ನು ಅಂತಾರಾಷ್ಟ್ರಿಯ ಕ್ರಿಕೆಟ್ ಸಮಿತಿ ಐಸಿಸಿ ಅಮಾನತುಗೊಳಿಸಿದೆ. ಕ್ರಿಕೆಟ್ ವಿಷಯದಲ್ಲಿ ಅನಾವಶ್ಯಕವಾಗಿ ರಾಜಕೀಯ ಮಧ್ಯಪ್ರವೇಶದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.
ಲಂಡನ್ ನಲ್ಲಿ ಸಭೆ ಸೇರಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಅಧಿಕಾರಿಗಳು ಈ ಆದೇಶವನ್ನು ಕೈಗೊಂಡಿದ್ದಾರೆ. ಅದರನ್ವಯ ತಕ್ಷಣದಿಂದಲೇ ಈ ಆದೇಶ ಜಾರಿಗೆ ಬರಲಿದೆ. ಜಿಂಬ್ವಾಬೆ ತಂಡ ಐಸಿಸಿ ಸಂವಿಧಾನದ 2.4 (ಸಿ) ಹಾಗೂ (ಡಿ) ವಿಧಿಯನ್ನು ಉಲ್ಲಂಘಿಸಿದೆ ಎಂದು ಸಮಿತಿ ಹೇಳಿದೆ. ಕ್ರಿಕೆಟ್ ನಲ್ಲಿ ಯಾವುದೇ ಆಡಳಿತದ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ ಎಂದು ಕೂಡ ಐಸಿಸಿ ಸ್ಪಷ್ಟಪಡಿಸಿದೆ.