ಹೈದರಾಬಾದ್, ಜು 20 (Daijiworld News/SM): ಐಸಿಸಿ ಕ್ರಿಕೆಟ್ ವಿಶ್ವಕಪ್ ಸೀಸನ್ ಮುಗಿದಿದ್ದು, ಇದೀಗ ಪ್ರೋ ಕಬಡ್ಡಿ ಸೀಸನ್ ಆರಂಭಗೊಂಡಿದೆ. ತಮ್ಮ ನೆಚ್ಚಿನ ತಂಡ ಹಾಗೂ ಆಟಗಾರ ಪೈಪೋಟಿ ನೋಡೋದರಲ್ಲಿ ಇದೀಗ ಕಬಡ್ಡಿ ಪ್ರಿಯರು ಮುಂದಾಗಿದ್ದಾರೆ.
ಜುಲೈ 20ರಿಂದ ಕಬಡ್ಡಿ ಸೀಸನ್ ಶುರುವಾಗಿದ್ದು, ಮುಂದಿನ ಒಂದು ತಿಂಗಳುಗಳ ಕಾಲ ಪ್ರೇಕ್ಷಕರಿಗೆ ರಸದೌತನವಾಗಿದೆ. ಹೈದರಾಬಾದ್ನ ಗಚಿಬೌಲಿ ಇಂಡೋರ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪ್ರೊ ಕಬಡ್ಡಿ ಲೀಗ್ 2019ರ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಯು ಮುಂಬಾ 31-25ರ ಗೆಲುವು ದಾಖಲಿಸಿದೆ. ಅಭಿಷೇಕ್ ಸಿಂಗ್ ರೇಡಿಂಗ್ ಪಾಯಿಂಟ್ ಗಳು ಮುಂಬೈಗೆ ಪಾಲಿಗೆ ವರದಾನವಾದವು.
ಪಂದ್ಯ ಆರಂಭದಿಂದಲೂ ಯು ಮುಂಬಾ ತನ್ನ ಓಟವನ್ನು ಮುನ್ನಡೆಯಲ್ಲೇ ಕೊಂಡೊಯ್ದಿತ್ತು. ಮೊದಲಾರ್ಧದಲ್ಲಿ ಯು ಮುಂಬಾ 17-10ರ ಮುನ್ನಡೆ ಸಾಧಿಸಿತ್ತು. ಮುಂಬೈ ಪರ ಎದುರಾಳಿಗೆ ರೇಡಿಂಗ್ ಬೆದರಿಕೆಯೊಡ್ಡಿದ ಅಭಿಷೇಕ್ ಭರ್ಜರಿ 10 ಪಾಯಿಂಟ್ಗಳ ಕೊಡುಗೆಯಿತ್ತರು. 5-10 ಅಂಕಗಳ ಮುನ್ನಡೆಯಲ್ಲೇ ಸಾಗಿದ ಯು-ಮುಂಬ ತಂಡ ಅಂತಿಮವಾಗಿ ಆರು ಅಂಕಗಳ ಅಂತರದಿಂದ ಗೆಲುವಿನ ನಗೆ ಚೆಲ್ಲಿತು.