ಸುಬ್ರಹ್ಮಣ್ಯ, ಮಾ. 08 (DaijiworldNews/TA): ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಟ್ರೇಡ್ ಯೂನಿಯನ್ ದಕ್ಷಿಣ ಕನ್ನಡ ವತಿಯಿಂದ ಕೆ.ಟಿ.ಡಿ.ಒ ಪ್ರೀಮಿಯರ್ ಲೀಗ್ ಸೀಸನ್-2 ಕ್ರಿಕೆಟ್ ಪಂದ್ಯಾಟ ಸುಬ್ರಹ್ಮಣ್ಯದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಿತು.


ಸುಬ್ರಹ್ಮಣ್ಯ ಠಾಣಾಧಿಕಾರಿ ಆಂಜನೇಯ ರೆಡ್ಡಿ ಅವರು ದೀಪ ಬೆಳಗಿಸುವ ಮೂಲಕ ಪಂದ್ಯಾಟ ಉದ್ಘಾಟಿಸಿ ಕೆಲ ಹೊತ್ತು ಕ್ರಿಕೆಟ್ ಆಟ ಆಡಿದರು. ಈ ಸಂಧರ್ಭದಲ್ಲಿ ಸಭೆಯಲ್ಲಿ ಯೂನಿಯನ್ ನ ಜಿಲ್ಲಾಧ್ಯಕ್ಷರಾದ ಸಂದೀಪ್ ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಗೌರವಾಧ್ಯಕ್ಷರಾದ ಇಕ್ಯಾಲ್ ಬಿ.ಸಿ.ರೋಡ್, ಜಿಲ್ಲಾ ಗೌರವಾಧ್ಯಕ್ಷರಾದ ಶರತ್ ಕಿರಣ್, ಜಿಲ್ಲಾ ಉಪಾಧ್ಯಕ್ಷರಾದ ಜಯಂತ್ ಸುಳ್ಯ ಮತ್ತಿತರರು ಉಪಸ್ಥಿತರಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಸಾದಿಕ್ ಕುಳಾಯಿ ವಹಿಸಿದ್ದರು.
ಚಾಲಕರು ಮತ್ತು ರಸ್ತೆ ಅಪಘಾತ, ಯಾವುದೇ ಆರೋಗ್ಯ ಸಮಸ್ಯೆ ಇದ್ದಲ್ಲಿ ಆಂಬುಲೆನ್ಸ್ ಸೇವೆಯನ್ನು ನೀಡುತ್ತಿರುವುದು ಇದು ಒಳ್ಳೆಯ ಕೆಲಸವೆಂದು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಹೇಳಿದರು. ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ಡಾ.ರವಿ ಕಕ್ಕೆಪದವು, ಕುಕ್ಕೆಶ್ರೀ ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಅಧ್ಯಕ್ಷ ಕುಸುಮಾಧರ ಕೆ.ಆರಾಧನಾ, ರಾಜ್ಯ ಸಹಕೋಶಾಧಿಕಾರಿ ಹರೀಶ್ ಪುತ್ರನ್, ವಲಯ 21ರ ತಾಲೂಕು ಅಧ್ಯಕ್ಷ ಕಿಶೋರ್ ಕುಮಾರ್, ವಲಯ 70ರ ತಾಲೂಕು ಅಧ್ಯಕ್ಷರಾದ ಗಿರೀಶ್ ಬೆಳ್ತಂಗಡಿ, ವಲಯ 19ರ ತಾಲೂಕು ಅಧ್ಯಕ್ಷರಾದ ಕನಕ ಕೇಶವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೇಶ್ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು. ಈ ಪಂದ್ಯಾಟದಲ್ಲಿ ವಲಯ 19 ಸಿಟಿ ತಂಡ ಪ್ರಥಮ ಸ್ಥಾನ ಪಡೆಯಿತು.