ಲಕ್ನೋ, ಏ. 23 (DaijiworldNews/AA): ಕೇವಲ 15 ವರ್ಷ ವಯಸ್ಸಿನಲ್ಲೇ ಕ್ರಿಕೆಟ್ ಮೈದಾನದಲ್ಲಿ ಸ್ಫೋಟಕ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರು ನಾನು ಕಾರ್ಟೂನ್ ನೋಡಿಯೇ ಬ್ಯಾಟಿಂಗ್ಗೆ ಬರೋದು ಎಂದು ಹೇಳಿದ್ದಾರೆ.

ಪೋಸ್ಟ್ ಮ್ಯಾಚ್ ಸಂದರ್ಶನವೊಂದರಲ್ಲಿ ವೈಭವ್ ಅವರಿಗೆ "ಈ ವಯಸ್ಸಿನ ಮಕ್ಕಳು ಕಾರ್ಟೂನ್ ನೋಡುವಾಗ ನೀನು ಬೌಲರ್ಗಳ ಬೆವರಿಳಿಸುತ್ತಿದ್ದೀಯಾ, ನಿನ್ನ ಮನಸ್ಸಿನಲ್ಲಿ ಏನು ನಡೆಯುತ್ತಿರುತ್ತದೆ?" ಎಂದು ಕೇಳಲಾಗಿದೆ. ಅದಕ್ಕೆ ವೈಭವ್ ಅವರು ನೀಡಿದ ಉತ್ತರವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
"ಪಂದ್ಯಕ್ಕೂ ಮೊದಲು ನನ್ನ ತಲೆಯಲ್ಲಿ ಹೆಚ್ಚೇನೂ ಓಡುವುದಿಲ್ಲ. ನನಗೆ ಕಾರ್ಟೂನ್ ನೋಡುವ ಹವ್ಯಾಸವಿದೆ. ಹಾಗಾಗಿ ಇಂದಿಗೂ ನಾನು ಪಂದ್ಯ ಆರಂಭವಾಗುವ ಮೊದಲು ಕಾರ್ಟೂನ್ ನೋಡುತ್ತೇನೆ. ಇದರಿಂದ ಮನಸ್ಸು ಶಾಂತವಾಗಿರುತ್ತದೆ, ಆದರೆ ಪಂದ್ಯದ ಮೇಲೆ ನನ್ನ ಗಮನ ಪೂರ್ತಿ ಇರುತ್ತದೆ" ಎಂದು ವೈಭವ್ ತಿಳಿಸಿದ್ದಾರೆ.