ರಾಜಸ್ಥಾನ, ಏ. 28 (DaijiworldNews/AA): ಈ ಬಾರಿಯ ಐಪಿಎಲ್ನಲ್ಲಿ ತಮ್ಮ ಉತ್ತಮ ಬ್ಯಾಟಿಂಗ್ ಪ್ರದರ್ಶನದ ನೀಡುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ 'ನನ್ನ ಜೊತೆ ಸೆಲ್ಫಿ ಬೇಕಾದ್ರೆ 100 ರೂಪಾಯಿ ಕೊಡಿ' ಎಂದು ಮಕ್ಕಳ ಬಳಿ ಕೇಳಿದ್ದಾರೆ.

ವೈಭವ್ ಅವರ ಜನಪ್ರಿಯತೆ ಹೆಚ್ಚಾದಂತೆ ಅಭಿಮಾನಿಗಳು ಅವರ ಜೊತೆ ಸೆಲ್ಫಿಗಾಗಿ ಮುಗಿಬೀಳುತ್ತಿದ್ದಾರೆ. ಅದರಂತೆ ಇಬ್ಬರು ಮಕ್ಕಳು ವೈಭವ್ ಅವರ ಬಳಿ ಬಂದು ಸೆಲ್ಫಿ ಕೇಳಿದ್ದಾರೆ. ಈ ವೇಳೆ ಒಂದು ಸೆಲ್ಫಿಗೆ 100 ರೂ. ಕೊಡಿ ಎಂದು ಅವರು ಕೇಳಿದ್ದಾರೆ. ಈ ಪೈಕಿ ಓರ್ವ ಬಾಲಕ 200 ರೂಪಾಯಿ ಕೊಡಲು ಮುಂದಾಗಿದ್ದಾನೆ. ಬಳಿಕ ತಮಾಷೆ ಮಾಡಿಕೊಂಡು ನಗುತ್ತಾ ಮಕ್ಕಳ ಜೊತೆ ವೈಭವ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಕಳೆದ ಬಾರಿಯಂತೆ ಈ ಬಾರಿಯ ಐಪಿಎಲ್ ಸೀಸನ್ಲ್ಲಿ ವೈಭವ್ ಸೂರ್ಯವಂಶಿ ತಮ್ಮ ಉತ್ತಮ ಬ್ಯಾಟಿಂಗ್ ಮೂಲಕ ಸದ್ದು ಮಾಡುತ್ತಿದ್ದಾರೆ. ಜೈಪುರದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 36 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದ 3ನೇ ಅತಿ ವೇಗದ ಶತಕ ಸಿಡಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.