ಮುಂಬೈ,ಸೆ. 12 (DaijiworldNews/AK): ಬಹುನಿರೀಕ್ಷಿತ ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್- 2026 ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಈ ಹೈ-ವೋಲ್ಟೇಜ್ ಟೂರ್ನಿಗಾಗಿ ಭಾರತದ ದಿಗ್ಗಜ ಆಟಗಾರರನ್ನೊಳಗೊಂಡ ಇಂಡಿಯಾ ಚಾಂಪಿಯನ್ಸ್ ತಂಡವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ.

23 ಸದಸ್ಯರನ್ನು ಒಳಗೊಂಡಿರುವ ಈ ತಂಡವನ್ನು ಯುವರಾಜ್ ಸಿಂಗ್ ಮುನ್ನಡೆಸಲಿದ್ದಾರೆ. ಭಾರತೀಯ ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಾದ ಸುರೇಶ್ ರೈನಾ, ಇರ್ಫಾನ್ ಪಠಾಣ್ ಹಾಗೂ ಹರ್ಭಜನ್ ಸಿಂಗ್ ಅವರೊಂದಿಗೆ ಇತ್ತೀಚೆಗಷ್ಟೇ ನಿವೃತ್ತಿ ಘೋಷಿಸಿದ ‘ಗಬ್ಬರ್’ ಖ್ಯಾತಿಯ ಶಿಖರ್ ಧವನ್, ರಾಬಿನ್ ಉತ್ತಪ್ಪ ಮತ್ತು ಅಂಬಾಟಿ ರಾಯುಡು ಕೂಡ ತಂಡದಲ್ಲಿದ್ದಾರೆ.
ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ಮೂರನೇ ಸೀಸನ್ ಅಕ್ಟೋಬರ್ 3 ರಿಂದ ಅಕ್ಟೋಬರ್ 18, 2026 ರವರೆಗೆ ನಡೆಯಲಿದೆ. ಈ ಬಾರಿ ಜಾಗತಿಕವಾಗಿ ಒಟ್ಟು 7 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಕಳೆದ ಎರಡು ಸೀಸನ್ ಇಂಗ್ಲೆಂಡ್ನಲ್ಲಿ ಆಯೋಜಿಸಲಾಗಿತ್ತು. ಈ ಬಾರಿಯ ಟೂರ್ನಿಗೆ ಯುಎಇ ಆತಿಥ್ಯವಹಿಸಲಿದೆ.
ಇಂಡಿಯಾ ಚಾಂಪಿಯನ್ಸ್ ತಂಡ: ಯುವರಾಜ್ ಸಿಂಗ್ (ನಾಯಕ), ಶಿಖರ್ ಧವನ್, ಸುರೇಶ್ ರೈನಾ, ಅಂಬಟಿ ರಾಯುಡು, ರಾಬಿನ್ ಉತ್ತಪ್ಪ, ನಮನ್ ಓಜಾ, ಸೌರಭ್ ತಿವಾರಿ, ಗುರುಕೀರತ್ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಸ್ಟುವರ್ಟ್ ಬಿನ್ನಿ, ಹರ್ಭಜನ್ ಸಿಂಗ್, ಪಿಯೂಷ್ ಚಾವ್ಲಾ, ಪವನ್ ನೇಗಿ, ರಾಹುಲ್ ಶರ್ಮಾ, ಆರ್. ಪಿ. ಸಿಂಗ್, ಧವಳ್ ಕುಲಕರ್ಣಿ, ವಿನಯ್ ಕುಮಾರ್, ಸಿದ್ಧಾರ್ಥ್ ಕೌಲ್, ವರುಣ್ ಆರೋನ್, ಅಭಿಮನ್ಯು ಮಿಥುನ್, ಅನುರೀತ್ ಸಿಂಗ್ ಮತ್ತು ರಾಹುಲ್ ಶುಕ್ಲಾ.