ಮುಂಬೈ, ಏ 25 (DaijiworldNews/DB): ಮಂಗಳೂರು ಹುಡುಗ ಕೆ.ಎಲ್. ರಾಹುಲ್ ಐಪಿಎಲ್ನಲ್ಲಿ ಶತಕದೊಂದಿಗೆ ಮಿಂಚಿದರು. ಆ ಮೂಲಕ ವಿರಾಟ್ ಕೊಹ್ಲಿಯ ದಾಖಲೆ ಮುರಿಯಲು ಇನ್ನೊಂದೇ ಶತಕ ಬಾಕಿ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಸದ್ಯ ಐಪಿಎಲ್ನಲ್ಲಿ ಅತ್ಯಧಿಕ ಶತಕ ದಾಖಲೆ ಇರುವುದು ವಿರಾಟ್ ಕೊಹ್ಲಿಯದ್ದು, ಈವರೆಗ ಐದು ಶತಕ ಸಿಡಿಸುವ ಮೂಲಕ ಕೊಹ್ಲಿ ಶತಕವೀರ ಎನಿಸಿಕೊಂಡಿದ್ದಾರೆ. ಇದೀಗ ರಾಹುಲ್ ಕೂಡಾ ಕೊಹ್ಲಿ ದಾರಿಯನ್ನು ಹಿಡಿಯುತ್ತಿದ್ದು, ಇಲ್ಲಿವರೆಗೆ ಐಪಿಎಲ್ನಲ್ಲಿ ನಾಲ್ಕು ಶತಕ ಸಿಡಿಸಿ ಮಿಂಚಿದ್ದಾರೆ. ಆ ಮೂಲಕ ಕೊಹ್ಲಿ ದಾಖಲೆಯನ್ನು ಮುರಿಯಲು ಇನ್ನೊಂದೇ ಶತಕ ಬಾಕಿ ಇದೆ. ಭಾನುವಾರ ನಡೆದ ಐಪಿಎಲ್ನ 26ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ 60 ಎಸೆತಗಳಲ್ಲಿ ಅಜೇಯ 103 ರನ್ ಗಳಿಸಿ ರಾಹುಲ್ ಶತಕವೀರ ಎನಿಸಿಕೊಂಡರು.
ರೋಹಿತ್ ಶರ್ಮಾ ಐಪಿಎಲ್ನಲ್ಲಿ ಎರಡು ಮತ್ತು ಟೀಂ ಇಂಡಿಯಾ ಪರ ಐದು ಶತಕ ಸಿಡಿಸಿ ಒಟ್ಟು ಏಳು ಶತಕಗಳ ಮೂಲಕ ದಾಖಲೆ ಮಾಡಿದ್ದಾರೆ. ಇವರಿಗೂ ರಾಹುಲ್ ಇದೀಗ ಟಫ್ ಸ್ಪರ್ಧೆ ನೀಡುತ್ತಿದ್ದಾರೆ ಎಂದೇ ಹೇಳಬಹುದು. ಏಕೆಂದರೆ ಟೀಮ್ ಇಂಡಿಯಾ ಪರ ಎರಡು ಶತಕ ಮತ್ತು ಐಪಿಎಲ್ನಲ್ಲಿ ನಾಲ್ಕು ಶತಕ ಬಾರಿಸಿದ ಹೆಗ್ಗಳಿಕೆಯೂ ಕೆ.ಎಲ್. ರಾಹುಲ್ಗಿದೆ. ಒಟ್ಟು ಆರು ಶತಕಗಳ ಮೂಲಕ ಹಿಟ್ಮ್ಯಾನ್ ಹೆಸರಿನಲ್ಲಿದ್ದ ದಾಖಲೆಗಳನ್ನು ರಾಹುಲ್ ಸರಿಗಟ್ಟಿದ್ದಾರೆ.