ಮುಂಬೈ, ಏ 27 (DaijiworldNews/DB): ಐಪಿಎಲ್ನಲ್ಲಿ ವಿರಾಟ್ ಕೊಹ್ಲಿಯ ಕಳಪೆ ಸಾಧನೆಯಿಂದಾಗಿ ಕೊಹ್ಲಿ ಐಪಿಎಲ್ ಪಂದ್ಯದಿಂದ ಹೊರಗುಳಿಯುವುದೇ ಲೇಸು ಎಂದು ಕೋಚ್ ರವಿಶಾಸ್ತ್ರಿ ಸಲಹೆ ಮಾಡಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಒಂಬತ್ತು ಪಂದ್ಯಗಳಲ್ಲಿ ಕೊಹ್ಲಿ ಕೇವಲ 128 ರನ್ ಮಾತ್ರ ಕಲೆ ಹಾಕಿದ್ದಾರೆ. ಹೀಗಾಗಿ ಆರ್ಸಿಬಿ ಸೋಲುಂಡಿದ್ದು ಮಾತ್ರವಲ್ಲದೆ, ಕಳಪೆ ಸಾಧನೆ ತೋರಿದ ಕೊಹ್ಲಿ ಬಗೆಗೂ ಅಸಮಾಧಾನ ಶುರುವಾಗಿದೆ. ಕೊಹ್ಲಿ ಕಳಪೆ ಸಾಧನೆ ಬಗ್ಗೆ ಮಾತನಾಡಿರುವ ರವಿಶಾಸ್ತ್ರಿ, ಸದ್ಯ ಅವರಿಗೆ ಬಿಡುವು ಅಗತ್ಯವಿದ್ದು, ಅವರು ಐಪಿಎಲ್ ಆಡದಿರುವುದೇ ಒಳ್ಳೆಯದು ಎಂದಿದ್ದಾರೆ.
ಕೊಹ್ಲಿ ಯಾವುದೇ ಬಿಡುವು ತೆಗೆದುಕೊಳ್ಳದೆ ಆಡಿರುವುದರಿಂದ ಅವರಿಗೀಗ ಬಿಡುವು ಅಗತ್ಯವಿದೆ. ಮನಸ್ಸನ್ನು ಫ್ರೆಶ್ ಮಾಡಿಕೊಂಡು ಸ್ವಲ್ಪ ಸಮಯ ಹೊರಗಿದ್ದು ಮತ್ತೆ ಆಟವನ್ನು ಮುಂದುವರಿಸಿದರೆ ಉತ್ತಮ ಎಂದವರು ಸಲಹೆ ಮಾಡಿದ್ದಾರೆ. ಸದ್ಯ ಐಪಿಎಲ್ ಪಂದ್ಯದ ವೇಳೆ ಭಾರತ ತಂಡಕ್ಕೆ ಆಫ್ ಸೀಸನ್ ಆಗಿರುವುದರಿಂದ ಇಲ್ಲಿ ಆಡದೇ ಬಿಡುವು ಪಡೆದುಕೊಳ್ಳಲು ಸೂಕ್ತ ಸಮಯವೂ ಆಗಿದೆ. ಉತ್ತಮ ಆಟಗಾರನಾಗಿ ರೂಪು ತಳೆಯಬೇಕಾದರೆ ಇಂತಹ ನಿರ್ಧಾರಗಳು ಕೆಲವೊಮ್ಮೆ ಅಗತ್ಯವಾಗಿದೆ ಎಂದಿದ್ದಾರೆ ರವಿಶಾಸ್ತ್ರಿ. 2019ರ ಬಳಿಕ ಕೊಹ್ಲಿ ಶತಕ ಸಿಡಿಸಿಲ್ಲ.