ಮುಂಬೈ, ಏ 28 (DaijiworldNews/DB): ಗುಜರಾತ್ ಟೈಟಾನ್ಸ್ ತಂಡದ ಕೋಚ್ ಆಗಿರುವ ಗ್ಯಾರಿ ಕರ್ಸ್ಟನ್ ಈ ಐಪಿಎಲ್ ಮುಗಿಯುತ್ತಿದ್ದಂತೆ ಕೋಚ್ ಹುದ್ದೆಯಿಂದ ನಿರ್ಗಮಿಸುತ್ತಿದ್ದಾರೆ ಎನ್ನಲಾಗಿದೆ.
ಕರ್ಸ್ಟನ್ ಭಾರತೀಯ ತಂಡದ ಕೋಚ್ ಆಗಿ ಉತ್ತಮ ಕಾರ್ಯ ದಕ್ಷತೆ ತೋರಿದ್ದರು. ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ನ ಕೋಚ್ ಆಗಿ ಗಮನ ಸೆಳೆದರು. ಅಲ್ಲದೆ ಈ ತಂಡವು ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿರುವುದಕ್ಕೆ ಕೋಚ್ ಕರ್ಸ್ಟನ್ ಅವರೇ ಕಾರಣ ಎಂಬ ಪ್ರತಿಕ್ರಿಯೆಗಳೂ ಕ್ರೀಡಾಂಗಣದಿಂದ ಮತ್ತು ಅಭಿಮಾನಿಗಳಿಂದ ವ್ಯಕ್ತವಾಗುತ್ತಿದೆ. ಆದರೆ ಇದೇ ಖುಷಿಯ ನಡುವೆ ಕ್ರೀಡಾಭಿಮಾನಿಗಳಿಗೆ, ಅದರಲ್ಲೂ ಗುಜರಾತ್ ಟೈಟಾನ್ಸ್ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಹೊರ ಬಿದ್ದಿದೆ. ಅದೆಂದರೆ ಈ ಐಪಿಎಲ್ ಮುಗಿಯುತ್ತಿದ್ದಂತೇ ಕೋಚ್ ಹುದ್ದೆಯಿಂದ ಕರ್ಸ್ಟನ್ ನಿರ್ಗಮಿಸಲಿದ್ದಾರೆ ಎನ್ನುವುದು.
2011ರ ವಿಶ್ವಕಪ್ ವಿಜೇತ ತಂಡದ ಕೋಚ್ ಆಗಿದ್ದ ಕರ್ಸ್ಟನ್ ಮತ್ತು ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರು ಹೊಸದೊಂದು ಜವಾಬ್ದಾರಿ ವಹಿಸಿಕೊಳ್ಳುವುದಕ್ಕೆ ಹೊರಟಿದ್ದಾರೆ. ಇಬ್ಬರೂ ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಮತ್ತು ಟೆಸ್ಟ್ ನಾಯಕರಾಗಿ ನೇಮಕಗೊಳ್ಳಲಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಇಂಗ್ಲೆಂಡ್ ತಂಡವು ಕಳೆದ ಹಲವು ವರ್ಷಗಳಿಂದ ಮೈದಾನದಲ್ಲಿ ಕಳಪೆ ಸಾಧನೆಯನ್ನು ತೋರುತ್ತಿರುವುದರಿಂದ ತಂಡದ ಕೋಚ್ ಆಗಿದ್ದ ಜೋ ರೂಟ್ ಸಮಾಧಾನಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಇದೇ ಕಾರಣದಿಂದ ಅವವರು ಕೋಚ್ ಹುದ್ದೆಯಿಂದ ಹಿಂದೆ ಸರಿದಿದ್ದು, ಈ ಸ್ಥಾನಕ್ಕೆ ಕರ್ಸ್ಟನ್ ನೇಮಕ ನಡೆಯುತ್ತಿದೆ ಎಂದು ವರದಿಯಾಗಿದೆ.