ಲಕ್ನೋ, ಏ 30 (DaijiworldNews/DB): ವಾರಣಾಸಿಗೆ ಆಧ್ಯಾತ್ಮಿಕ ಪ್ರಯಾಣಕ್ಕಾಗಿ ಬಂದಿದ್ದ ಬಾಸ್ಕೆಟ್ ಬಾಲ್ ಸ್ಟಾರ್ ಆಟಗಾರ ಡ್ವಿಟ್ ಹೊವಾರ್ಡ್ ಪವಿತ್ರ ಆಧ್ಯಾತ್ಮಿಕ ನಗರಕ್ಕೆ ಹೆಸರುವಾಸಿಯಾದ ವಾರಣಾಸಿಯಲ್ಲಿ ಹಲವಾರು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಿರುವ ಅವರು, ಶಾಂತಿ ಮತ್ತು ಆತ್ಮ ಪುನರುಜ್ಜೀವನಗೊಳಿಸಿದ ಪ್ರಯಾಣದ ಅನುಭೂತಿಯನ್ನು ವಾರಣಾಸಿ ಭೇಟಿಯಿಂದ ನಾನು ಪಡೆದುಕೊಂಡೆ. ಅನೇಕ ಸ್ಪೂರ್ತಿ ಕತೆಗಳನ್ನು ಹೊಂದಿದ ಖ್ಯಾತಿ ವಾರಣಾಸಿಗಿದೆ. ಇದರ ಪುನರ್ಜನ್ಮ ನಮ್ಮಂತ ಹಲವರನ್ನು ಪ್ರೇರೇಪಿಸಿದ್ದು, ಹಲವು ಸುಧಾರಣೆ ಕಂಡ ಈ ನಗರ ಪ್ರವಾಸಿಗರನ್ನು ಸೆಳೆಯುವಲ್ಲಿ ಅತ್ಯಾಕರ್ಷಕಗೊಂಡಿದೆ. ಇದಕ್ಕೆಲ್ಲ ಕಾರಣರಾದ ನರೇಂದ್ರ ಮೋದಿಯವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಗಂಗಾರತಿ ಸಂದರ್ಭದಲ್ಲಿ ಡ್ವಿಟ್ ಹೊವಾರ್ಡ್ ಆ ಸ್ಥಳದಲ್ಲಿದ್ದು, ವಿಶೇಷ ಅನುಭವಕ್ಕೆ ಸಾಕ್ಷಿಯಾದರು ಎಂದು ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯು ಟ್ವೀಟ್ ಮಾಡಿದೆ.
ಉತ್ತರ ಅಮೆರಿಕಾದ ವೃತ್ತಿಪರ ಬ್ಯಾಸ್ಕೆಟ್ಬಾಲ್ ಲೀಗ್ ರಾಷ್ಟ್ರೀಯ ಬಾಸ್ಕೆಟ್ಬಾಲ್ ಅಸೋಸಿಯೇಷನ್ ಎನ್ಬಿಎನಲ್ಲಿ ಲಾಸ್ ಏಂಜಲೀಸ್ ಲೇಕರ್ಸ್ನ ಸೆಂಟರ್-ಫಾರ್ವರ್ಡ್ ಆಗಿ ಹೊವಾರ್ಡ್ ಪ್ರಸ್ತುತ ಆಡುತ್ತಿದ್ದಾರೆ.