ಹೊಸದಿಲ್ಲಿ, ಮೇ 11 (DaijiworldNews/DB): ಜಕಾರ್ತದಲ್ಲಿ ಮೇ 23ರಿಂದ ಆರಂಭವಾಗುವ ಏಷ್ಯಾ ಕಪ್ ಕೂಟದಲ್ಲಿ ಭಾರತೀಯ ಹಾಕಿ ತಂಡವನ್ನು ಮುನ್ನಡೆಸಲು ಡ್ರ್ಯಾಗ್ಫ್ಲಿಕರ್ ರುಪೀಂದರ್ ಪಾಲ್ ಸಿಂಗ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಬಿರೇಂದ್ರ ಲಾಕ್ರ ಉಪನಾಯಕರಾಗಿ ಆರಿಸಲ್ಪಟ್ಟಿದ್ದಾರೆ. ವಿಶೇಷವೆಂದರೆ ರುಪೀಂದರ್ ಮತ್ತು ಲಾಕ್ರ ಇಬ್ಬರೂ ನಿವೃತ್ತಿ ಘೋಷಿಸಿದ್ದವರು. ಆದರೆ ಪ್ರಸ್ತುತ ಮರಳಿ ತಂಡಕ್ಕೆ ಆಗಮಿಸಿದ್ದಾರೆ.
ಭಾರತೀಯ ತಂಡದಲ್ಲಿ ಒಟ್ಟು 20 ಮಂದಿ ಸದಸ್ಯರಿದ್ದಾರೆ. ಮುಂದಿನ ಜನವರಿಯಲ್ಲಿ ನಡೆಯುವ ವಿಶ್ವಕಪ್ಗೆ ಅರ್ಹತಾ ಕೂಟವಾಗಿ ಏಷ್ಯಾ ಕಪ್ ಕೂಟ ಮಹತ್ವ ಪಡೆಯಲಿದೆ. ಈ ಕೂಟದಲ್ಲಿ ವಿಜೇತವಾದ ಮೂರು ತಂಡಗಳು ವಿಶ್ವಕಪ್ಗೆ ಅರ್ಹತೆ ಪಡೆಯುವುದರಿಂದ ಭಾರತಕ್ಕೆ ವಿಶ್ವಕಪ್ನಲ್ಲಿ ಆಡಲು ಈ ಕೂಟ ಮಹತ್ವದ್ದಾಗಿದೆ. ಆಟಗಾರ ಎಸ್.ವಿ. ಸುನಿಲ್ ಭಾರತ ತಂಡದಲ್ಲಿರುವುದು ತಂಡಕ್ಕೆ ಹೆಚ್ಚಿನ ಬಲ ತಂದುಕೊಟ್ಟಿದೆ. ಅಲ್ಲದೆ ಈ ಬಾರಿಯ ಕೂಟಕ್ಕೆ ಭಾರತವು ಆತಿಥ್ಯ ವಹಿಸಿದೆ.
ಎಸ್.ವಿ. ಸುನಿಲ್, ಟೋಕಿಯೊ ಗೇಮ್ಸ್ ನಲ್ಲಿ ಕಂಚು ಗೆದ್ದ ರುಪೀಂದರ್ ಮತ್ತು ಲಾಕ್ರ ಒಲಿಂಪಿಕ್ಸ್ ಬಳಿಕ ನಿವೃತ್ತಿ ಘೋಷಿಸಿದ್ದರು. ಆದರೆ ಪ್ರಸ್ತುತ ಮೂವರೂ ತಂಡಕ್ಕೆ ಮರಳಿರುವುದು ತಂಡದ ಬಲ ಹೆಚ್ಚಾಗಲು ಕಾರಣವಾಗಿದೆ. ಇನ್ನು ಯಶ್ದೀಪ್ ಸಿವಾಚ್, ಅಭಿಷೇಕ್ ಲಾಕ್ರ, ಮನ್ಜಿತ್, ವಿಷ್ಣುಕಾಂತ್ ಸಿಂಗ್, ಉತ್ತಮ್ ಸಿಂಗ್ ಏಷ್ಯಾ ಕಪ್ ತಂಡದಲ್ಲಿದ್ದಾರೆ. ಭಾರತವು ಜಪಾನ್, ಪಾಕಿಸ್ಥಾನ ಮತ್ತು ಇಂಡೊನೇಷ್ಯಾ ’ಎ’ ಹಾಗೂ ಮಲೇಷ್ಯಾ, ಕೊರಿಯಾ, ಒಮಾನ್ ಮತ್ತು ಬಾಂಗ್ಲಾದೇಶ ’ಬಿ’ ಬಣದಲ್ಲಿದ್ದು, ಸೆಣಸಾಡಲಿವೆ.