ನವದೆಹಲಿ, ಮೇ 12 (DaijiworldNews/DB): ಕೊಹ್ಲಿ ಅವರು ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಮತ್ತೆ ಫಾರ್ಮ್ಗೆ ಮರಳುತ್ತಾರೆಂಬ ವಿಶ್ವಾಸವಿದೆ ಎಂದು ಪಾಕಿಸ್ತಾನ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸದ್ಯ ಕೊಹ್ಲಿ ಲಯ ಕಳೆದುಕೊಂಡಿರುವ ಕಾರಣ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಶತಕ ಗಳಿಸಿದ ಬಹುತೇಕ ಆಟಗಾರರು ಶೂನ್ಯಕ್ಕೆ ಔಟಾದ ಉದಾಹರಣೆಗಳಿವೆ. ಕೊಹ್ಲಿ ವಿಚಾರದಲ್ಲಿಯೂ ಹಾಗೇ ಆಗಿದೆ. ಆದರೆ, ಅವರು ಮತ್ತೆ ತಮ್ಮ ಕಠಿಣ ಪರಿಶ್ರಮದ ಮೂಲಕ ಫಾರ್ಮ್ಗೆ ಬರುತ್ತಾರೆಂಬ ವಿಶ್ವಾಸವಿದೆ ಎಂದರು.
ದುಬೈನಲ್ಲಿ 2021ರಲ್ಲಿ ನಡೆದ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತದ ವಿರುದ್ದ ಪಾಕಿಸ್ತಾನ ತಂಡ ಜಯ ಗಳಿಸಿತ್ತು. ಭಾರತದ ವಿರುದ್ದದ ಈ ಜಯವು ಐಸಿಸಿಯ ವಿಶ್ವಕಪ್ ಪಂದ್ಯಗಳಲ್ಲಿ ಪಾಕ್ಗೆ ಮೊದಲನೆಯದಾಗಿತ್ತು. ಈ ಪಂದ್ಯದಲ್ಲಿ ರಿಜ್ವಾನ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ 79 ರನ್ ಗಳಿಸಿದ್ದರು. ಇವರ ಆಟ ಪಾಕ್ಗೆ ಜಯ ತಂದು ಕೊಡಲು ದೊಡ್ಡ ಮಟ್ಟದಲ್ಲಿ ಕಾರಣವಾಗಿತ್ತು.