ನವದೆಹಲಿ, ಮೇ 13 (DaijiworldNews/MS): ಭಾರತದ ಸ್ಟಾರ್ ಬಾಕ್ಸರ್ ಮಾಂಗ್ಟೆ ಚುಂಗ್ನೀಜಾಂಗ್ ಮೇರಿ ಕೋಮ್ ಈ ವರ್ಷ ಜುಲೈನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ತಯಾರಿ ಆರಂಭಿಸಿದ್ದಾರೆ.
ಆರು ಬಾರಿ ವಿಶ್ವ ಅಮೆಚೂರ್ ಬಾಕ್ಸಿಂಗ್ ಚಾಂಪಿಯನ್ಶಿಪ್ ಗೆದ್ದ ಏಕೈಕ ಮಹಿಳೆ, ಮೊದಲ ಏಳು ವಿಶ್ವ ಚಾಂಪಿಯನ್ಶಿಪ್ಗಳಲ್ಲಿ ಪ್ರತಿಯೊಂದರಲ್ಲಿ ಪದಕ ಗೆದ್ದ ಏಕೈಕ ಮಹಿಳಾ ಬಾಕ್ಸರ್ ಮತ್ತು ಎಂಟು ವಿಶ್ವ ಚಾಂಪಿಯನ್ಶಿಪ್ ಪದಕಗಳನ್ನು ಗೆದ್ದ ಏಕೈಕ ಬಾಕ್ಸರ್ ಎಂಬ ಖ್ಯಾತಿ ಗಳಿಸಿದ ಅವರ ಸಂಪೂರ್ಣ ಗಮನ ಈಗ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿದೆ
ಸಾಮಾಜಿಕ ಮಾಧ್ಯಮ ಕೂ ನಲ್ಲಿ ಜಿಮ್ ನಲ್ಲಿ ಕಸರತ್ತು ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡು, ಮಾಡು ಅಥವ ಮಡಿ.. ಯಾವುದೇ ಶಾರ್ಟ್ಕಟ್ಗಳಿಲ್ಲ . ಇಲ್ಲಿ ಮಾಡಬೇಕಾಗಿರುವುದು ಪ್ರಯತ್ನವಲ್ಲ (ಟ್ರೈ) . ಹಾರ್ಡ್ ವರ್ಕ್ ಮಾತ್ರ ಎಂದು ಬರೆದುಕೊಂಡಿದ್ದಾರೆ
ಬಾಕ್ಸಿಂಗ್ ಅಭ್ಯಾಸದ ಬಳಿಕ , ಮೇರಿ ಕೋಮ್ ಮಧ್ಯಾಹ್ನ ಜಿಮ್ಗೆ ಹೋಗಿ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹದ ತೂಕದ ವ್ಯಾಯಾಮಗಳಾದ ಪುಷ್-ಅಪ್ಗಳು ಮತ್ತು ಸಿಟ್-ಅಪ್ಗಳು ಮತ್ತು ಭಾರ ಎತ್ತುವಿಕೆಯೊಂದಿಗೆ ತನ್ನ ಸ್ನಾಯುಗಳನ್ನು ದೃಢವಾಗಿಡಲು ಈ ಸಮಯವನ್ನು ಬಳಸುತ್ತಿದ್ದಾರೆ. ಈ ತರಬೇತಿಯ ನಂತರ, ಅವರು ಮತ್ತೆ ತನ್ನ ಬಾಕ್ಸಿಂಗ್ ಅಭ್ಯಾಸಕ್ಕೆ ಮರಳುತ್ತಾರೆ.