ಮುಂಬೈ, ಮೇ 14 (DaijiworldNews/DB): ಐಪಿಎಲ್ಗೆ ನಿವೃತ್ತಿ ಘೋಷಣೆ ಮಾಡಿ ಟ್ವೀಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟರ್ ಅಂಬಟಿ ರಾಯುಡು ಬಳಿಕ ತನ್ನ ಟ್ವೀಟ್ನ್ನು ಅಳಿಸಿ ಹಾಕಿದ್ದಾರೆ.
ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ರಾಯುಡ್ ತಾನು ಐಪಿಎಲ್ನಿಂದ ನಿವೃತ್ತಿಯಾಗುತ್ತಿದ್ದೇನೆ. ಇದು ನನ್ನ ಕೊನೆಯ ಐಪಿಎಲ್ ಆಗಿದೆ. ಕಳೆದ 13 ವರ್ಷಗಳಿಂದ ಎರಡು ಶ್ರೇಷ್ಠ ತಂಡಗಳಲ್ಲಿ ಆಡಿದ ತೃಪ್ತಿ ಇದೆ. ಅದೊಂದು ಅದ್ಬುತ ಸಮಯವಾಗಿದೆ. ಇದಕ್ಕಾಗಿ ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್ಕೆಗೆ ಧನ್ಯವಾದ ಎಂದು ಬರೆದುಕೊಂಡಿದ್ದರು. ಈ ಟ್ವೀಟ್ಗೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡಾ ಪ್ರತಿಕ್ರಿಯಿಸಿ ಶುಭಾಶಯ ಕೋರಿದ್ದರು. ಆದರೆ, ಟ್ವೀಟ್ ಮಾಡಿ ಸ್ವಲ್ಪ ಸಮಯದ ಬಳಿಕ ರಾಯುಡ್ ಟ್ವೀಟ್ನ್ನು ಅಳಿಸಿ ಹಾಕಿದ್ದಾರೆ. ಇದರಿಂದಾಗಿ ರಾಯುಡ್ ಐಪಿಎಲ್ ನಿವೃತ್ತಿ ಬಗ್ಗೆ ಅಭಿಮಾನಿಗಳಲ್ಲಿ, ಕ್ರಿಕೆಟ್ ಪ್ರೇಮಿಗಳಲ್ಲಿ ಗೊಂದಲ ಸೃಷ್ಟಿಯಾಗಿದೆ.
ಆದರೆ ಇದರ ಬೆನ್ನಲ್ಲೇ ಸುದ್ದಿಸಂಸ್ಥೆಯೊಂದರ ಜೊತೆ ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್ ಮಾತನಾಡಿ, ಕಳಪೆ ಪ್ರದರ್ಶನದಿಂದ ಬೇಸತ್ತು ರಾವುಡ್ ಟ್ವೀಟ್ ಮಾಡಿದ್ದಾರೆಯೇ ಹೊರತು ಅವರು ಐಪಿಎಲ್ನಿಂದ ನಿವೃತ್ತಿಯಾಗುತ್ತಿಲ್ಲ. ಆದರೆ ಅವರಿಗೆ ನಾನು ಮನವರಿಕೆ ಮಾಡಿದ್ದೇನೆ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವಂತೆ ತಿಳಿ ಹೇಳಿದ್ದೇನೆ. ಹೀಗಾಗಿ ಅವರು ಟ್ವೀಟ್ ಅಳಿಸಿ ಹಾಕಿದ್ದಾರೆ. ಅವರು ಮುಂದೆಯೂ ನಮ್ಮೊಂದಿಗೆ ಇರುತ್ತಾರೆ ಎಂದಿದ್ದಾರೆ.