ಮುಂಬೈ, ಮೇ 18 (DaijiworldNews/DB): ಟಿ-20 ಕ್ರಿಕೆಟ್ ನಲ್ಲಿ ಕೇವಲ ಒಂದು ವಿಕೆಟ್ನೊಂದಿಗೆ 250 ವಿಕೆಟ್ಗಳನ್ನು ಪಡೆದ ಮೊದಲ ಭಾರತೀಯ ವೇಗಿ ಎಂಬ ಹೆಗ್ಗಳಿಕೆಗೆ ಜಸ್ಪ್ರೀತ್ ಬುಮ್ರಾ ಪಾತ್ರರಾಗಿದ್ದಾರೆ. ಆ ಮೂಲಕ ಮಂಗಳವಾರ ಬುಮ್ರಾಹೊಸ ಮೈಲಿಗಲ್ಲು ಸಾಧಿಸಿದರು.
ಬುಮ್ರಾ ಭಾರತ ಕ್ರಿಕೆಟ್ ತಂಡದ ಅತ್ಯುತ್ತಮ ಬೌಲರ್ಗಳಲ್ಲಿ ಒಬ್ಬರು. ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲರ್ ಕೂಡಾ ಇವರೇ.
ಈ ವರ್ಷದ ಐಪಿಎಲ್ನಲ್ಲಿ ಐದು ವಿಕೆಟ್ ಪಡೆದ ಬುಮ್ರಾ, ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಟಿ-20 ಕ್ರಿಕೆಟ್ ನಲ್ಲಿ ಮಂಗಳವಾರ ಹೊಸ ಸಾಧನೆ ಮಾಡಿ ಮಿಂಚಿದ್ದಾರೆ. ಬುಮ್ರಾ ವಾಷಿಂಗ್ಟನ್ ಸುಂದರ್ ಅವರ ಒಂದು ವಿಕೆಟ್ ಮಾತ್ರ ಪಡೆದರು. ಆದರೆ ಆ ಒಂದು ವಿಕೆಟಿನೊಂದಿಗೆ 250 ವಿಕೆಟ್ತನ್ನದಾಗಿಸಿಕೊಂಡರು.
ಸ್ಪಿನ್ನರ್ಗಳಾದ ರವಿಚಂದ್ರನ್ ಅಶ್ವಿನ್ (274), ಯಜುವೇಂದ್ರ ಚಹಾಲ್ (271), ಪಿಯೂಷ್ ಚಾವ್ಲಾ (270) ಹಾಗೂ ಅಮಿತ್ ಮಿಶ್ರಾ (262) ಟಿ-20 ಕ್ರಿಕೆಟ್ನಲ್ಲಿ 250 ವಿಕೆಟ್ಗಳ ಗಡಿ ದಾಟಿ ಸಾಧನೆ ಮಾಡಿದವರಾಗಿದ್ದಾರೆ. ಆದರೆ ಬೌಲರ್ಗಳ ಪೈಕಿ ಬುಮ್ರಾರೆ ಈ ಸಾಧನೆ ಮಾಡಿದ ಮೊದಲ ಭಾರತೀಯ ವೇಗಿಯಾಗಿದ್ದಾರೆ. ವೇಗಿ ಭುವನೇಶ್ವರ ಕುಮಾರ್ 223 ವಿಕೆಟ್ ಪಡೆದಿದ್ದು, ಸದ್ಯ ಅವರ ಹೆಸರು ಎರಡನೇ ಸ್ಥಾನದಲ್ಲಿದೆ.