ಮುಂಬೈ, ಮೇ 18 (DaijiworldNews/SM): ಇಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಲಕ್ನೋ ತಂಡ ಕೊಲ್ಕತ್ತಾ ತಂಡದ ವಿರುದ್ಧ ದಾಖಲೆಯ ಮೊತ್ತ ಪೇರಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಲಕ್ನೋ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆರಂಭಿಕರಾದ ನಾಯಕ ಕೆ.ಎಲ್. ರಾಹುಲ್ ಹಾಗೂ ಕ್ಲಿಂಟನ್ ಡಿಕಾಕ್ ಕೊಲ್ಕತ್ತಾ ಬೌಲರ್ ಗಳನ್ನು ಹಿಗ್ಗಾಮುಗ್ಗ ಚಚ್ಚಿದರು.
ಕ್ವಿಂಟನ್ ಡಿಕಾಕ್ ಅಜೇಯ 140 ಪೇರಿಸಿದರೆ, ಕೆ.ಎಲ್. ರಾಹುಲ್ 68 ರನ್ ಗಳಿಸಿ ಡಿಕಾಕ್ ಅವರಿಗೆ ಸಾತ್ ನೀಡಿದರು. 70 ಎಸೆತಗಳನ್ನು ಎದುರಿಸಿದ ಡಿಕಾಕ್ 10 ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್ ಸಿಡಿಸಿದರು. ಈ ಮೂಲಕ ಆರಂಭಿಕರಾಗಿ ಕಣಕ್ಕಿಳಿದ ಜೊತೆಯಾಟವನ್ನು ಮುರಿಯಲಾಗದೆ ಕೊಲ್ಕತ್ತ ಬೌಲರ್ ಗಳು ಸುಸ್ತಾದರು.
ಅಂತಿಮವಾಗಿ ಇಪ್ಪತ್ತು ಓವರ್ ಗಳಲ್ಲಿ 210 ರನ್ ಗಳನ್ನು ಸಿಡಿಸುವ ಮೂಲಕ ಲಕ್ನೋ ತಂಡ ಹೊಸ ದಾಖಲೆಯೊಂದನ್ನು ನಿರ್ಮಿಸಿದೆ.