ಜರ್ಮನಿ, ಮೇ 20 (DaijiworldNews/DB): ಜರ್ಮನಿಯ ಪ್ರಸಿದ್ಧ ಬಾಕ್ಸಿಂಗ್ ಆಟಗಾರ ಮುಸಾ ಯಮಕ್ (38) ಬಾಕ್ಸಿಂಗ್ ರಿಂಗ್ನಲ್ಲೇ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಆಘಾತಕಾರಿ ಘಟನೆ ಮ್ಯೂನಿಚ್ನಲ್ಲಿ ನಡೆದಿದೆ.
ಮ್ಯೂನಿಚ್ನಲ್ಲಿ ಉಗಾಂಡಾದ ಸ್ಫರ್ಧಿ ಹಮ್ಜಾವಂಡೇರಾ ವಿರುದ್ಧ ಮುಸಾ ಯಮಕ್ ಬಾಕ್ಸಿಂಗ್ ಆಡುತ್ತಿದ್ದರು. ಎರಡನೇ ಸುತ್ತಿನವರೆಗೂ ಜಿದ್ದಾಜಿದ್ದಿನ ಪೈಪೋಟಿ ಇತ್ತು. ಆದರೆ ಮೂರನೇ ಸುತ್ತು ಆರಂಭವಾಗುತ್ತಿದ್ದಂತೆ ಯಮಕ್ ಕುಸಿದು ಬಿದ್ದರು. ತತ್ಕ್ಷಣ ಸ್ಥಳದಲ್ಲಿದ್ದ ವೈದ್ಯರು ಅವರನ್ನು ಪರೀಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮುಸಾ ಯಮಕ್ ಮೃತಪಟ್ಟರು.
ಮುಸಾ ಯಮಕ್ ಜರ್ಮನಿಯಲ್ಲಿ ಬಾಕ್ಸಿಂಗ್ಗೆ ದೊಡ್ಡ ಹೆಸರು. ಬಾಕ್ಸಿಂಗ್ ಅಖಾಡಕ್ಕೆ ಇಳಿದರೆ ಎದುರಾಳಿ ಫೈಟರ್ಗೆ ನಡುಕ ಹುಟ್ಟುವಷ್ಟು ಛಲಗಾರ. ಆದರೆ ಇದೀಗ ವಿಧಿ ಅತಿ ಚಿಕ್ಕ ವಯಸ್ಸಿನಲ್ಲಿ ಪ್ರತಿಭಾನ್ವಿತ ಆಟಗಾರನನ್ನು ಕಸಿದುಕೊಂಡಿದೆ.
ಯುರೋಪಿಯನ್ ಮತ್ತು ಏಷ್ಯನ್ ಚಾಂಪಿಯನ್ ಆಗಿದ್ದ ಮುಸಾ ಯಮಕ್ ಸಣ್ಣ ವಯಸ್ಸಿನಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವುದು ದುಃಖ ತಂದಿದೆ ಎಂದು ಟರ್ಕಿ ಅಧಿಕಾರಿಗಳು ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡು ಸಂತಾಪ ಸೂಚಿಸಿದ್ದಾರೆ.