ಕೊಲ್ಕತ್ತಾ, ಮೇ 25 (DaijiworldNews/SM): ಇಲ್ಲಿನ ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ಐಪಿಎಲ್ ಟಿ-20 ಹದಿನೈದನೇ ಆವೃತ್ತಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ ಸಿಬಿ ತಂಡ ಲಕ್ನೊ ಸೂಪರ್ ಜೈಂಟ್ಸ್ ಗೆ ಗೆಲ್ಲಲು 208 ರನ್ ಗಳ ಬೃಹತ್ ಗುರಿ ನಿಗದಿ ಪಡಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ ಸಿಬಿ ತಂಡಕ್ಕೆ ರಜತ್ ಪಟಿದಾರ್ ಆಸರೆಯಾದರು. ಅಜೇಯರಾಗಿ 112 ರನ್ ಗಳ ಶತಕ ಸಿಡಿಸಿ ಮಿಂಚಿದರು. ಹಾಗೂ ತಂಡವನ್ನು ಅಲ್ಪ ಮೊತ್ತದಿಂದ ಪಾರು ಮಾಡಿದರು. ಮತ್ತೊಂದೆಡೆ ಕೊಹ್ಲಿ 25, ದಿನೇಶ್ ಕಾರ್ತಿಕ್ 37, ಮ್ಯಾಕ್ಸ್ ವೆಲ್ 9 ರನ್ ಸಿಡಿಸಿದರು. ಡ್ಯುಪ್ಲೆಸಿಸ್ ರನ್ ಗಳಿಸಲಾಗದೆ ನಿರ್ಗಮಿಸಿದರು.
ಅಂತಿಮವಾಗಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿದರು.