ಮುಂಬೈ, ಮೇ 26 (DaijiworldNews/DB): ಡಬ್ಲಿನ್ನಲ್ಲಿ ನಡೆಯುವ ಭಾರತ ಮತ್ತು ಐರ್ಲೆಂಡ್ ನಡುವಿನ 2 ಟಿ20 ಪಂದ್ಯಗಳ ಸರಣಿಗೆ ಭಾರತ ತಂಡದ ಮುಖ್ಯ ಕೋಚ್ ಆಗಿ ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ಬಿಸಿಸಿಐ ನೇಮಿಸಿದೆ.
ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಟೀಂ ಇಂಡಿಯಾ ಜೊತೆ ಇಂಗ್ಲೆಂಡ್ ಪ್ರವಾಸದಲ್ಲಿರುವ ಕಾರಣ ಬಿಸಿಸಿಐ ಈ ಮಹತ್ತರ ಬದಲಾವಣೆಯನ್ನು ಮಾಡಿದೆ. ಟೀಂ ಇಂಡಿಯಾ ಕೋಚ್ ಆಗಿ ಲಕ್ಷ್ಮಣ್ ಡಬ್ಬಿನ್ಗೆ ಪ್ರವಾಸ ಬೆಳೆಸಲಿದ್ದಾರೆ. ಇಲ್ಲಿ ಜೂನ್ 26 ಮತ್ತು 28 ರಂದು ಎರಡು ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿರುವುದಾಗಿ ವರದಿಯಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿ ಮುಗಿದ ಬಳಿಕ ಡಬ್ಬಿನ್ನಲ್ಲಿ ಪಂದ್ಯ ಆರಂಭವಾಗಲಿದೆ. ಭಾರತ ಈ ಹಿಂದೆ ಮೂರು ಬಾರಿ ಐರ್ಲೆಂಡ್ ವಿರುದ್ದ ಟಿ20 ಪಂದ್ಯದಲ್ಲಿ ವಿಜಯ ಸಾಧಿಸಿತ್ತು. ಹಾಗಾಗಿ ಈ ಬಾರಿಯ ಪಂದ್ಯವೂ ಭಾರತದ ಪಾಲಿಗೆ ಮಹತ್ವದ್ದಾಗಲಿದೆ.
ಎನ್ ಸಿಎ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರಿಂಗೆ ಕೋಚಿಂಗ್ನಲ್ಲಿ ಈಗಾಗಲೇ ಅನುಭವವಿದೆ. ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಕೋಚಿಂಗ್ ಸ್ಟಾಫ್ ಆಗಿ ಅನುಭವ ಹೊಂದಿದವರು.