ಅಹಮದಾಬಾದ್, ಮೇ 29 (DaijiworldNews/SM): ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ ಟಿ-20 ಫೈನಲ್ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಮಣಿಸುವ ಮೂಲಕ ಗುಜರಾತ್ ತಂಡ ಚೊಚ್ಚಲ ಟೂರ್ನಿಯಲ್ಲಿ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ ತಂಡದ ಬ್ಯಾಟ್ಸ್ ಮನ್ ಗಳು ಗುಜರಾತ್ ಬೌಲರ್ ಗಳ ದಾಳಿಗೆ ತತ್ತರಿಸಿ ರನ್ ಗಳಿಸಲು ಪರದಾಡುತ್ತಿದೆ. ಬಟ್ಲರ್ 39, ಜೈಸ್ವಾಲ್ 22, ಸಂಜು ಸ್ಯಾಮ್ಸನ್ 14, ಪಡಿಕ್ಕಲ್ 2, ಹೆಟ್ಮಯರ್ 11, ಪರಾಗ್ 15, ಬೋಲ್ಟ್ 11 ರನ್ ಗಳಿಸಿದರು. ಅಂತಿಮವಾಗಿ ಇಪ್ಪತ್ತು ಓವರ್ ಗಳಲ್ಲಿ ಒಂಬತ್ತು ವಿಕೆಟ್ ಗಳ ನಷ್ಟಕ್ಕೆ 130 ರನ್ ಗಳಿಸಲಷ್ಟೇ ಶಕ್ತವಾಗಿಯಿತು.
ಗುಜರಾತ್ ಪರ ನಾಯಕ ಹಾರ್ದಿಕ್ ಪಾಂಡ್ಯ 3, ಸಾಯಿ ಕಿಶೋರ್ 2 ವಿಕೆಟ್ ಪಡೆದರು.
ಇನ್ನು ಇದಕ್ಕೆ ಉತ್ತರವಾಗಿ ಗುಜರಾತ್ ತಂಡ 18.1 ಓವರ್ ಗಳಲ್ಲಿ 3 ವಿಕೆಟ್ ಗಳ ನಷ್ಟಕ್ಕೆ 133 ರನ್ ಗಳಿಸಿ ಗೆಲುವಿನ ನಗೆ ಚೆಲ್ಲಿತು. ಶುಬ್ ಮನ್ ಗಿಲ್ 45, ಹಾರ್ದಿಕ್ ಪಾಂಡ್ಯ 34, ಮಿಲ್ಲರ್ 32 ರನ್ ಗಳಿಸಿದರು. ತಂಡದ ಗೆಲುವಿನಲ್ಲಿ ನಾಯಕ ಹಾಗೂ ಅಲ್ ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ಪಾಲು ಪ್ರಮುಖವಾಗಿತ್ತು. ಇನ್ನು ಟೂರ್ನಿಯುದ್ದಕ್ಕೂ ಮೊದಲ ಸ್ಥಾನವನ್ನೇ ಕಾಯ್ದುಕೊಂಡು ಬಂದಿದ್ದ ಗುಜರಾತ್ ಚೊಚ್ಚಲ ಬಾರಿಗೆ ಐಪಿಎಲ್ ಗೆದ್ದುಕೊಂಡು ಸಂಭ್ರಮದಲ್ಲಿದೆ.