ನವದೆಹಲಿ, ಜೂ 01 (DaijiworldNews/DB): ಅಂತಾರಾಷ್ಟ್ರೀಯವಾಗಿ ಸಾಮರ್ಥ್ಯದ ತಪ್ಪು ನಿರೂಪಣೆಯ ಕಾರಣಕ್ಕಾಗಿ ಭಾರತದ ಪ್ಯಾರಾ ಅತ್ಲೀಟ್ ವಿನೋದ್ಕುಮಾರ್ ಅವರನ್ನು ಎರಡು ವರ್ಷ ಕಾಲ ಅಮಾನತು ಮಾಡಲಾಗಿದೆ.
ಕಳೆದ ಅಗಸ್ಟ್ನಲ್ಲಿ ನಡೆದ ಟೋಕಿಯೋ ಪ್ಯಾರಾ ಒಲಿಂಪಿಕ್ಸ್ನಲ್ಲಿ ಡಿಸ್ಕಸ್ ತ್ರೋನಲ್ಲಿ ಕಂಚಿನ ವಿಜೇತರಾಗಿದ್ದರು. ಬೋರ್ಡ್ ಆಫ್ ಅಪೀಲ್ ಆಫ್ ಕ್ಲಾಸಿಫಿಕೇಶನ್ ಸಂಸ್ಥೆಯು ಅಮಾನತುಗೊಳಿಸಿದೆ. ಹೀಗಾಗಿ 2023ರ ಅಗಸ್ಟ್ವರೆಗೆ ಕುಮಾರ್ ಯಾವುದೇ ಪ್ಯಾರಾ ಅತ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸುವಂತಿಲ್ಲ ಎಂದು ವಿಶ್ವ ಪ್ಯಾರಾ ಅತ್ಲೆಟಿಕ್ಸ್ ವೆಬ್ಸೈಟ್ವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.
ಟೋಕಿಯೋ 2020 ಪ್ಯಾರಾ ಒಲಿಂಪಿಕ್ ಗೇಮ್ಸ್ನಲ್ಲಿ ಕುಮಾರ್ ಉದ್ದೇಶಪೂರ್ವಕವಾಗಿಯೇ ತಮ್ಮ ಸಾಮರ್ಥ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರಿಸುವಲ್ಲಿ ವಿಫಲರಾಗಿದ್ದಾರೆ. ಇದು ನಿಯಮದ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.