ಸ್ಟಾವೆಂಜರ್ (ನಾರ್ವೆ), ಜೂ. 03 (DaijiworldNews/DB): ಭಾರತದ ವಿಶ್ವನಾಥನ್ ಆನಂದ್ ನಾರ್ವೆ ಚೆಸ್ ಕೂಟದ ಕ್ಲಾಸಿಕಲ್ ವಿಭಾಗದಲ್ಲಿ 2ನೇ ಗೆಲುವಿನ ನಗೆ ಬೀರಿದ್ದಾರೆ. ಬಲ್ಗೇರಿಯದ ವ್ಯಾಸೆಲಿನ್ ಟೊಪಲೋವ್ ವಿರುದ್ಧ ಗೆಲುವು ಸಾಧಿಸಿ ಕೂಟದ ಅಗ್ರಸ್ಥಾನ ತಲುಪಿದ್ದಾರೆ.
36 ನಡೆಗಳಲ್ಲಿ ಎದುರಾಳಿಯನ್ನು ಸೋಲಿಸಿದ ಆನಂದ್ ಸತತ 2ನೇ ಗೆಲುವು ಸಾಧಿಸಿದರು. ಫ್ರಾನ್ಸ್ನ ಮ್ಯಾಕ್ಸಿಮ್ ವಾಕಿಯರ್ ಲಗ್ರಾವೆ ವಿರುದ್ಧ ಮೊದಲ ಪಂದ್ಯದಲ್ಲಿ ಗೆದ್ದಿದ್ದರು.
ಇದಕ್ಕೂ ಮುನ್ನ ನಡೆದ ಬ್ಲಿಟ್ಝ್ ನಲ್ಲಿ 4ನೇ ಸ್ಥಾನ ಪಡೆದಿದ್ದ ಆನಂದ್, ಇದೀಗ ಗೆಲ್ಲುವ ಮೂಲಕ ವಿಶ್ವ ಚಾಲ್ತಿ ಶ್ರೇಯಾಂಕದಲ್ಲಿ 9ನೇ ಸ್ಥಾನದಲ್ಲಿದ್ದಾರೆ. 52 ವರ್ಷ ವಯಸ್ಸಿನ ಅವರು ಐದು ಬಾರಿ ವಿಶ್ವಚಾಂಪಿಯನ್ ಆಗಿದ್ದಾರೆ.