ಮುಂಬೈ, ಜೂ 09 (DaijiworldNews/DB): ದಕ್ಷಿಣ ಆಫ್ರಿಕಾ ವಿರುದ್ದ ನಡೆಯಲಿರುವ ಟಿ20 ಸರಣಿ ಆರಂಭಕ್ಕೂ ಮುನ್ನವೇ ಗಾಯಾಳುವಾಗಿ ಕೂಟದಿಂದ ಹೊರ ಹೋಗಿರುವ ಕೆ.ಎಲ್. ರಾಹುಲ್ ವಿರುದ್ದ ನೆಟ್ಟಿಗರು ಅಸಮಾಧಾನ ತೋಡಿಕೊಂಡಿದ್ದಾರೆ.
ಐಪಿಎಲ್ನಲ್ಲಿ ಆಡುವಾಗ ಇಲ್ಲದ ಗಾಯ ಟೀಂ ಇಂಡಿಯಾ ಪರ ಆಡುವಾಗ ಹೇಗೆ ಬರುತ್ತದೆ ಎಂದು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸಿದ್ದಾರೆ.
ದ.ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಕೆ.ಎಲ್. ರಾಹುಲ್ ನಾಯಕನಾಗಿ ಆಯ್ಕೆಯಾಗಿದ್ದರು. ಆದರೆ ಸರಣಿ ಆರಂಭಕ್ಕೂ ಮುನ್ನವೇ ಗಾಯದ ಕಾರಣ ನೀಡಿ ಅವರು ಕೂಟದಿಂದ ಹೊರ ಹೋಗಿದ್ದಾರೆ. ಇದು ಕ್ರಿಕೆಟ್ ಅಭಿಮಾನಿಗಳನ್ನು ಕೆರಳಿಸಿದ್ದು, ಟೀಂ ಇಂಡಿಯಾ ಪರ ಆಡುವಾಗ ರಾಹುಲ್ಗೆ ಪದೇಪದೇ ಗಾಯದ ಸಮಸ್ಯೆ ಬರುತ್ತದೆ. ಐಪಿಎಲ್ನಲ್ಲಿ ದಿನಗಟ್ಟಲೆ ಆಡಿದರೂ ಯಾವುದೇ ಗಾಯ ಆಗುವುದಿಲ್ಲ. ಇದೆಲ್ಲ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಎಲ್ಲವೂ ದುಡ್ಡಿನ ಮಹಿಮೆ ಎಂದು ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ.
ಗಾಯದ ಕಾರಣದಿಂದ ಐಪಿಎಲ್ಗೂ ಮುನ್ನ ಟೀಂ ಇಂಡಿಯಾ ಪರ ಆಡದೆ ರಾಹುಲ್ ಹೊರಗುಳಿದಿದ್ದರು. ಆಮೇಲೆ ಐಪಿಎಲ್ನಲ್ಲಿ ಆಡಿದ್ದರು. ಪ್ರಸ್ತುತ ಅಭ್ಯಾಸದ ವೇಳೆ ಮತ್ತೆ ಗಾಯವಾಗಿದೆ ಎಂಬ ಕಾರಣಕ್ಕಾಗಿ ರಾಹುಲ್ ಕೂಟದಿಂದ ಹೊರಗುಳಿದಿದ್ದಾರೆ. ಕುಲದೀಪ್ ಯಾದವ್ ಕೂಡಾ ನೆಟ್ ಪ್ರಾಕ್ಟೀಸ್