ನವದೆಹಲಿ, ಜೂ 10 (DaijiworldNews/DB): ಭಾರತದ ಮಹಿಳಾ ಕ್ರಿಕೆಟ್ ತಂಡದ ನೂತನ ನಾಯಕಿಯಾಗಿ ಹರ್ಮನ್ಪ್ರೀತ್ ಕೌರ್ ಅವರನ್ನು ಆಯ್ಕೆ ಮಾಡಲಾಗಿದೆ.
ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿದ್ದ ಮಿಥಾಲಿ ರಾಜ್ ಅವರ ದಿಢೀರ್ ನಿವೃತ್ತಿಯಿಂದಾಗಿ ಹರ್ಮನ್ಪ್ರೀತ್ ಕೌರ್ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ. ಹರ್ಮನ್ ಈ ಹಿಂದೆ ತಂಡದ ಉಪ ನಾಯಕಿಯಾಗಿದ್ದರು.
ಶ್ರೀಲಂಕಾದ ವಿರುದ್ಧ ನಡೆಯಲಿರುವ ಏಕದಿನ ಹಾಗೂ ಟ್ವೆಂಟಿ-20 ಸರಣಿಯಲ್ಲಿ ಮಹಿಳಾ ಕ್ರಿಕೆಟ್ ತಂಡವನ್ನು ಹರ್ಮನ್ ಪ್ರೀತ್ ಮುನ್ನಡೆಸಲಿದ್ದಾರೆ. ಟಿ-20 ಮಾದರಿ ಕ್ರಿಕೆಟ್ ಪಂದ್ಯಾಟಗಳಿಗೆ ನಾಯಕಿ ಜವಾಬ್ದಾರಿ ವಹಿಸಿ ಅನುಭವವಿರುವ ಹರ್ಮನ್ ಪ್ರೀತ್ ಮುಂದೆ ಏಕದಿನ ಕ್ರಿಕೆಟ್ಗೂ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂಬುದಾಗಿ ವರದಿಯಾಗಿದೆ.