ನವದೆಹಲಿ, ಜೂ 11 (DaijiworldNews/MS): ಭಾರತದ ಅತ್ಯುತ್ತಮ ಬಾಕ್ಸರ್ ಹಾಗೂ ಆರು ಬಾರಿಯ ವಿಶ್ವ ಚಾಂಪಿಯನ್ ಎಂಸಿ ಮೇರಿ ಕೋಮ್ ಅವರ ಈ ವರ್ಷದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಕನಸು ಶುಕ್ರವಾರ ನುಚ್ಚುನೂರಾಗಿದೆ.
ವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ಟ್ರಯಲ್ಸ್ ವೇಳೆ ಕಾಲಿನ ಗಾಯದಿಂದಾಗಿ 2018ರ ಸಿಡಬ್ಲ್ಯೂಜಿ ಚಿನ್ನದ ಪದಕ ವಿಜೇತೆ ಮೇರಿ, ಪಂದ್ಯದಿಂದ ಹಿಂದೆ ಸರಿದು ಸಿಡಬ್ಲ್ಯುಜಿ 2022ರಿಂದ ಹೊರಗುಳಿಯಬೇಕಾಯಿತು.
ಈ ವರ್ಷದ ಜುಲೈ-ಆಗಸ್ಟ್ನಲ್ಲಿ ಬರ್ಮಿಂಗ್ಹ್ಯಾಮ್ನಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟ ನಡೆಯಲಿದೆ.
ಗಾಯವಾದ ಬಳಿಕವೂ 39 ವರ್ಷದ ಮೇರಿ ಕೋಮ್ ಸ್ಪರ್ಧಿಸಲು ಎದ್ದು ನಿಲ್ಲಲು ಪ್ರಯತ್ನಿಸಿದರು. ಆದರೆ ಒಂದೆರಡು ಪಂಚ್ಗಳ ಬಳಿಕ ಮತ್ತೆ ಸಮತೋಲನ ಕಳೆದುಕೊಂಡರು ಮತ್ತು ಎಡಗಾಲನ್ನ ಹಿಡಿದುಕೊಂಡು ಕುಳಿತರು. ಹೀಗಾಗಿ ಮೇರಿ ಕೋಮ್ ರಿಂಗ್ ತೊರೆಯಬೇಕಾಯಿತು. ಮ್ಯಾಚ್ ರೆಫರಿ ಹರಿಯಾಣದ ನೀತು ಅವರನ್ನು ವಿಜೇತ ಎಂದು ಘೋಷಿಸಿದರು. ಬರ್ಮಿಂಗ್ಹ್ಯಾಮ್ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ನತ್ತ ಗಮನ ಹರಿಸಲು ವಿಶ್ವ ಚಾಂಪಿಯನ್ಶಿಪ್ ಮತ್ತು ಏಷ್ಯನ್ ಗೇಮ್ಸ್ನಿಂದ ಹಿಂದೆ ಸರಿದ ಮೇರಿ ಕೋಮ್ಗೆ ಈ ಗಾಯ ದೊಡ್ಡ ಹೊಡೆತ ನೀಡಿದೆ.