ವಾಷಿಂಗ್ಟನ್, ಜೂ 12 (DaijiworldNews/DB): ಮ್ಯಾಂಚೆಸ್ಟರ್ ಯುನೈಟೆಡ್ ಫಾರ್ವರ್ಡ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಮೇಲಿದ್ದ ಅತ್ಯಾಚಾರ ಆರೋಪ ಶನಿವಾರ ಖುಲಾಸೆಗೊಂಡಿದೆ.
ಕ್ರಿಸ್ಟಿಯಾನೊ ರೊನಾಲ್ಡೊ ವಿರುದ್ಧದ ಲಾಸ್ ವೇಗಾಸ್ ಅತ್ಯಾಚಾರ ಮೊಕದ್ದಮೆಯನ್ನು ಅಮೆರಿಕ ಜಿಲ್ಲಾ ನ್ಯಾಯಾಧೀಶರು ವಜಾಗೊಳಿಸಿ ಆದೇಶ ಹೊರಡಿಸಿದರು. ಆರೋಪ ಮಾಡಿದ ಮಹಿಳೆಯ ವಕೀಲರಿಂದ ಪುರ್ಲೋಯಿನ್ಡ್ ಗೌಪ್ಯ ದಾಖಲೆಗಳನ್ನು ಪಡೆದು ಫೆಡರಲ್ ನ್ಯಾಯಾಧೀಶರಾದ ಜೆನ್ನಿಫರ್ ಡೋರ್ಸೆ ಅವರು ಕ್ರಿಸ್ಟಿಯಾನೊ ಅವರನ್ನು ಆರೋಪಮುಕ್ತಗೊಳಿಸಿ ಮೊಕದ್ದಮೆ ವಜಾ ಮಾಡಿದರು. ಅಲ್ಲದೆ, ಫುಟ್ಬಾಲ್ ಆಟಗಾರನ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಇದಾಗಿದ್ದು, ಮಹಿಳೆ ಪರ ವಕೀಲ ಲೆಸ್ಲಿ ಮಾರ್ಕ್ ಸ್ಟೊವಾಲ್ ಅವರ ನಡವಳಿಕೆಯಿಂದ ಆಟಗಾರನ ಭವಿಷ್ಯಕ್ಕೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟು 42 ಪುಟಗಳ ಆದೇಶವನ್ನು ನ್ಯಾಯಾಧೀಶರು ವಿವರಿಸಿದರು. ಅಲ್ಲದೆ, ಪ್ರಕರಣವನ್ನು ಸಂಪೂರ್ಣ ವಜಾಗೊಳಿಸಿದ್ದಾರೆ. ಹೀಗಾಗಿ ಅರ್ಜಿದಾರರಿಗೆ ಪ್ರಕರಣ ಮುಂದುವರಿಸುವ ಅವಕಾಶವೂ ಇಲ್ಲದಂತಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಏನಿದು ಪ್ರಕರಣ?
ಲಾಸ್ ವೇಗಾಸ್ನಲ್ಲಿ 2009ರಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದರು. ಇದಾದ ನಂತರ ರೊನಾಲ್ಡೊ ಅವರು ಮಹಿಳೆಗೆ 375,000 ಯುಎಸ್ಡಿಯನ್ನು ಪಾವತಿ ಮಾಡಿದ್ದರು. ಆನಂತರ ಪ್ರಕರಣವು ನ್ಯಾಯಾಲಯದಲ್ಲಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶ ಹೊರ ಬಿದ್ದಿದೆ.