ಮುಂಬೈ, ಜೂ 13 (DaijiworldNews/SM): ವಿಶ್ವದ ಶ್ರೀಮಂತ ಟಿ20 ಲೀಗ್ ಐಪಿಎಲ್ನ ಟಿವಿ ನೇರ ಪ್ರಸಾರ ಮತ್ತು ಡಿಜಿಟಲ್ ಪ್ರಸಾರ ಹಕ್ಕು ಬರೋಬ್ಬರಿ 44,075 ಕೋಟಿ ರೂ. ಗಳಿಗೆ ಮಾರಾಟವಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸ್ಪಷ್ಟಪಡಿಸಿಲ್ಲ.
ಎಎನ್ಐ ವರದಿಯ ಪ್ರಕಾರ ಎ ವರ್ಗದ ಟಿವಿ ಪ್ರಸಾರ ಹಕ್ಕು 23,575 ಕೋಟಿ ರೂ. ಗಳಿಗೆ ಮಾರಾಟವಾಗಿದೆ. ಬಿ ವರ್ಗದ ಡಿಜಿಟಲ್ ಪ್ರಸಾರದ ಹಕ್ಕು 20,500 ರೂಗಳಿಗೆ ಮಾರಾಟವಾಗಿದೆ. ಐಪಿಎಲ್ನ ಪ್ರತಿ ಪಂದ್ಯ ಪ್ರಸಾರ ಮಾಡುವುದುಕ್ಕೆ 57.5 ಕೋಟಿ ರೂ ಹಾಗು ಡಿಜಿಟಲ್ ಪ್ರಸಾರಕ್ಕೆ 50 ಕೋಟಿರೂ ನೀಡಬೇಕಿದೆ.
ಒಂದು ಪಂದ್ಯದ ಪ್ರಸಾರದ ಹಕ್ಕು 107.5 ಕೋಟಿ ರೂ ಆಗಿದೆ. ಇದು ಕಳೆದ ಅವಧಿಯಲ್ಲಿ ಸ್ಟಾರ್ ಇಂಡಿಯಾ ನೀಡಿದ್ದ ಮೊತ್ತದ ಡಬಲ್ ಆಗಿದೆ. ಮೂಲಗಳ ಪ್ರಕಾರ 5 ವರ್ಷಗಳ ಈ ಸಮಯದಲ್ಲಿ ನಡೆಯಲಿರುವ 410 ಪಂದ್ಯಗಳಿಗೆ ಈ ಒಪ್ಪಂದ ಜಾರಿಯಲ್ಲಿರಲಿದೆ.