ಮಂಗಳೂರು, ಜೂ 15 (DaijiworldNews/DB): ಬೆಂಗಳೂರಿನ ಯೋನೆಕ್ಸ್ ಸನ್ರೈಸ್ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ವತಿಯಿಂದ ನಡೆದ 19 ವರ್ಷದ ಹಿರಿಯ ಹುಡುಗಿಯರ ವಿಭಾಗದ ರಾಜ್ಯಶ್ರೇಣಿಯ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಮಂಗಳೂರಿನ ಟ್ರಿವ್ಯ ವೇಗಸ್ ಮತ್ತು ಬೆಂಗಳೂರಿನ ಪ್ರತೀಕ್ಷಾ ರಾಜ್ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಟ್ರಿವ್ಯ ವೇಗಸ್ ಅವರು ಪಾಲ್ದಾನೆಯ ರಾಜೇಶ್-ಸ್ಯಾಂಡ್ರಾ ವೇಗಸ್ ದಂಪತಿಯ ಪುತ್ರಿ. ಕೆಲರೈ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದಾರೆ. ಅವರು ಎಸ್ಬಿಎ ಬ್ಯಾಡ್ಮಿಂಟನ್ನ ಶ್ರೇಯಸ್ ಹಾಗೂ ವಿವೇಕ್ ಜೋನ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.