ಮುಂಬೈ, ಜೂ 21 (DaijiworldNews/DB): ಇಂಗ್ಲೆಂಡ್ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳಲು ತಯಾರಿ ನಡೆಸುತ್ತಿದ್ದ ಭಾರತೀಯ ಕ್ರಿಕೆಟ್ ತಂಡದ ಸ್ಪಿನ್ನರ್ ಆರ್.ಅಶ್ವಿನ್ ಗೆ ಇದೀಗ ಕೊರೊನಾ ಪಾಸಿಟಿವ್ ಆಗಿದೆ. ಆದರೆ ಇಂಗ್ಲೆಂಡ್ಗೆ ತೆರಳುವ ವೇಳೆ ಅವರ ಕ್ವಾರಂಟೈನ್ ಅವಧಿ ಮುಗಿಯಲಿದೆ ಎನ್ನಲಾಗಿದೆ.
ಜುಲೈ 1ರಿಂದ 5ರವರೆಗೆ ಇಂಗ್ಲೆಂಡ್ನ ಬರ್ಮಿಂಗ್ ಹ್ಯಾಮ್ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕಾಗಿ ಅಶ್ಚಿನ್ ಕಠಿಣ ತಯಾರಿಯನ್ನು ನಡೆಸುತ್ತಿದ್ದರು. ಆದರೆ ಇದೇ ವೇಳೆ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರು ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಲೇಬೇಕಿದೆ. ಹಾಗಾಗಿ ಸದ್ಯ ಅವರು ಕ್ವಾರಂಟೈನ್ಗೆ ಒಳಗಾಗಿದ್ದು, ವಿಶ್ರಾಂತಿಯಲ್ಲಿದ್ದಾರೆ.
ಸಂಪೂರ್ಣ ಗುಣಮುಖರಾದ ಬಳಿಕ ಮತ್ತು ಕ್ವಾರಂಟೈನ್ ಅವಧಿ ಮುಗಿದ ಬಳಿಕ ಅಶ್ವಿನ್ ಇಂಗ್ಲೆಂಡ್ ಪ್ರವಾಸ ತೆರಳಲಿದ್ದಾರೆ. ಪ್ರವಾಸ ಆರಂಭವಾಗುವ ವೇಳೆ ಇದು ಮುಗಿಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.