ವಡೋದರಾ, ಜೂ 25 (DaijiworldNews/DB): 105 ವರ್ಷದ ರಂಬಾಯಿ ಎಂಬ ವೃದ್ದೆಯೋರ್ವರು 100 ಮೀಟರ್ ಓಟವನ್ನು 45.40 ಸೆಕೆಂಡ್ ಗಳಲ್ಲಿ ಕ್ರಮಿಸಿ 101 ವರ್ಷದ ವೃದ್ದೆಯ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿಸಿದ್ದಾರೆ.
ವಡೋದರಾದಲ್ಲಿ ಭಾರತದ ಅಥ್ಲೆಟಿಕ್ಸ್ ಫೆಡರೇಶನ್ ನಡೆಸಿದ ರಾಷ್ಟ್ರೀಯ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ವಿಶ್ವ ಮಾಸ್ಟರ್ಸ್ ಕೂಟದಲ್ಲಿ ರಂಬಾಯಿ ಅವರು 100 ಮೀಟರ್ ಓಟವನ್ನ 45.40 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಿದರು. ಆ ಮೂಲಕ 74 ಸೆಕೆಂಡುಗಳಲ್ಲಿ 100 ಮೀಟರ್ ಓಟದಲ್ಲಿ ಚಿನ್ನ ಗೆದಿದ್ದ 101 ವರ್ಷದ ಮಾನ್ ಕೌರ್ ಅವರ ದಾಖಲೆಯನ್ನು ಮುರಿದು 105 ವರ್ಷದ ರಂಬಾಯಿ ಹೊಸ ದಾಖಲೆ ಮಾಡಿದರು. 100 ವರ್ಷ ಮೇಲ್ಪಟ್ಟವರ ಓಟದ ಸ್ಪರ್ಧೆ ಇದಾಗಿತ್ತು. ಅಭ್ಯರ್ಥಿಗಳ ಕೊರತೆಯಿಂದಾಗಿ ರಂಬಾಯಿ ಒಬ್ಬರೇ ಓಡಿ ಕ್ರಮಿಸಿದರು.
ಈ ಹಿಂದೆಯೂ ಇದೆ ಮಾದರಿಯ ಓಟದಲ್ಲಿ ನಾಲ್ಕು ಚಿನ್ನದ ಪದಕ ಪಡೆದಿದ್ದ ವೃದ್ದೆ, ಮಹಾರಾಷ್ಟ್ರದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ಐದು ಚಿನ್ನಗೆದ್ದು, ಬದ್ಲಾಪುರದಲ್ಲಿ ಎರಡು ಟ್ರೋಫಿ ಗೌರವಕ್ಕೆ ಪಾತ್ರರಾಗಿದ್ದರು ಎಂದು ವೃದ್ದೆಯ ಮೊಮ್ಮಗಳು ಶರ್ಮಿಳಾ ಹೇಳಿದ್ದಾರೆ.
2021ರಲ್ಲಿ ರಂಬಾಯಿ ಅವರು ಕ್ರೀಡಾ ಕ್ಷೇತ್ರಕ್ಕೆ ಧುಮಿಕ್ಕಿದ್ದು, ಆ ಬಳಿಕ ಆಹಾರದ ಬಗ್ಗೆ ಎಚ್ಚರಿಕೆ ವಹಿಸುತ್ತಾರೆ. ನಿತ್ಯ ತುಪ್ಪ, ಮೊಸರು ಸೇವೆನೆ ಮಾಡುತ್ತಾರೆ. ಶುದ್ದ ಹಾಲನ್ನು ದಿನಕ್ಕೆ ಎರಡು ಬಾರಿ ಕುಡಿಯುತ್ತಾರೆ ಎಂದವರು ತಿಳಿಸಿದ್ದಾರೆ.