ಬೆಂಗಳೂರು, ಜೂ 27 (DaijiworldNews/DB): ಗಾಯದ ಶಸ್ತ್ರಚಿಕಿತ್ಸೆಗಾಗಿ ಟೀಂ ಇಂಡಿಯಾ ಆಟಗಾರ ಕೆ.ಎಲ್. ರಾಹುಲ್ ಜರ್ಮನಿಗೆ ತೆರಳಿದ್ದಾರೆ. ಆದರೆ, ತಮ್ಮ ಪ್ರಿಯತಮೆ ಅಥಿಯಾ ಶೆಟ್ಟಿ ಅವರನ್ನೂ ರಾಹುಲ್ ಜೊತೆಗೇ ಕರೆದುಕೊಂಡು ಹೋಗಿದ್ದಾರೆ.
ರಾಹುಲ್ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯಕ್ಕಾಗಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಬೇಕಿತ್ತು. ಆದರೆ ಅಭ್ಯಾಸ ನಡೆಸುತ್ತಿದ್ದ ವೇಳೆ ಗಾಯ ಮಾಡಿಕೊಂಡು ಇಂಗ್ಲೆಂಡ್ ಪ್ರವಾಸದಿಂದ ದೂರ ಉಳಿದಿದ್ದರು. ಗಾಯ ಸ್ವಲ್ಪ ದೊಡ್ಡದಾಗಿರುವುದರಿಂದ ಶಸ್ತ್ರಚಿಕಿತ್ಸೆಗಾಗಿ ವೈದ್ಯರು ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಮುಂದೆ ಟೀಂ ಇಂಡಿಯಾ ಪರ ಆಡಲು ಯಾವುದೇ ಸಮಸ್ಯೆಯಾಗದಿರಲೆಂದು ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ರಾಹುಲ್ ಮುಂದಾಗಿದ್ದಾರೆ. ಹೀಗಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಪ್ರಿಯತಮೆ ಅಥಿಯಾ ಶೆಟ್ಟಿ ಜೊತೆ ಜರ್ಮನಿಗೆ ತೆರಳಿದ್ದಾರೆ.
ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಜೊತೆ ರಾಹುಲ್ ಡೇಟಿಂಗ್ ಮಾಡುತ್ತಿರುವುದು ಹಳೆ ಸುದ್ದಿ. ಇವರಿಬ್ಬರು ತಮ್ಮ ಸಂಬಂಧವನ್ನು ಬಹಿರಂಗವಾಗಿ ಅಧಿಕೃತಗೊಳಿಸಿದ್ದರು.