ಸ್ಟಾಕ್ ಹೋಂ, ಜು 01 (DaijiworldNews/DB): ಸ್ವೀಡನ್ ರಾಜಧಾನಿ ಸ್ಟಾಕ್ ಹೋಂ ನಲ್ಲಿ ನಡೆಯುತ್ತಿರುವ ಡೈಮಂಡ್ ಲೀಗ್ ನಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಬೆಳ್ಳಿ ಪದಕ ವಿಜೇತರಾಗಿದ್ದಾರೆ, ಅಲ್ಲದೆ ತನ್ನದೇ ರಾಷ್ಟ್ರೀಯ ದಾಖಲೆಯನ್ನು ಭದ್ರಪಡಿಸಿಕೊಂಡಿದ್ದಾರೆ.
89.94 ಮೀ ದೂರ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿ ಪದಕ ಪಡೆದಿಕೊಂಡರು. ಆದರೆ 90 ಮೀ. ಮಾರ್ಕ್ ಚಿನ್ನ ಗೆಲ್ಲಲು ಮಾನದಂಡವಾಗಿತ್ತಾದರೂ ಕೇವಲ o.o6ಮೀ ನಿಂದ ಚಿನ್ನ ಅವರ ಕೈತಪ್ಪಿತ್ತು. ಹೀಗಾಗಿ ಬೆಳ್ಳಿಗೆ ತೃಪ್ತಿ ಪಟ್ಟುಕೊಂಡರು. ಫಿನ್ ಲ್ಯಾಂಡ್ ನ ಪಾವೋ ನುರ್ಮಿ ನ್ಯಾಶನಲ್ ಗೇಮ್ಸ್ ನಲ್ಲಿ 89.3 ಮೀಟರ್ ಜಾವೆಲಿನ್ ಎಸೆತದ ಮೂಲಕ ಅವರು ಮಾಡಿದ ದಾಖಲೆಯನ್ನು ಈ ಬಾರಿಯ ಪಂದ್ಯದಲ್ಲಿಯೂ ಉಳಿಸಿಕೊಂಡಿದ್ದಾರೆ.
ಚೋಪ್ರಾ ಅವರ ಸಾಧನೆಯ ವೀಡಿಯೋವನ್ನು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಒಲಿಂಪಿಕ್ ಚಾಂಪಿಯನ್ ನೀರಜ್_ಚೋಪ್ರಾ 2022 ಸ್ಟಾಕ್ಹೋಮ್ ಡೈಮಂಡ್ ಲೀಗ್ ನಲ್ಲಿ 89.94 ಮೀ ಜಾವೆಲಿನ್ ಎಸೆಯುವ ಮೂಲಕ ಹೊಸ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಅಲ್ಲದೆ ಅವರು ಕೂಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.