ಮುಂಬೈ, ಜು 05 (DaijiworldNews/DB): ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರು ಕೇವಲ ಬ್ಯಾಡ್ಮಿಂಟನ್ಗಷ್ಟೇ ಅಲ್ಲ ಡ್ಯಾನ್ಸ್ ಮಾಡುವುದರಲ್ಲೂ ಸೈ ಎನಿಸಿಕೊಂಡಿದ್ದಾರೆ. ಆಗೊಮ್ಮೆ ಈಗೊಮ್ಮೆ ಡ್ಯಾನ್ಸ್ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಅವರಿಗೆ ಇದಕ್ಕೂ ಸಾಕಷ್ಟು ಅಭಿಮಾನಿಗಳಿದ್ದಾರೆ.
ಇತ್ತೀಚೆಗಷ್ಟೇ ಟ್ರೆಂಡಿಂಗ್ ಹಾಡಿಗೆ ಡ್ಯಾನ್ಸ್ ನೃತ್ಯ ಮಾಡುತ್ತಿರುವ ವೀಡಿಯೋವನ್ನು ಪಿ.ವಿ. ಸಿಂಧು ಅವರು ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಪೋಸ್ಟ್ ಮಾಡಿದ್ದರು. ಟೆನಿಸ್ ತಾರೆ ಸಾನಿಯಾ ಮಿರ್ಜಾ ಸೇರಿದಂತೆ ಹಲವರು ಇದನ್ನು ಲೈಕ್ ಮಾಡಿದ್ದಾರಲ್ಲದೆ, ಕಮೆಂಟ್ ಕೂಡಾ ಮಾಡಿದ್ದಾರೆ.
ಎರಡು ಬಿಟ್ ಮಿಕ್ಸ್ ಹಾಡುಗಳಿಗೆ ನೃತ್ಯ ಮಾಡುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದು, ಪಿ.ವಿ. ಸಿಂಧು ಅವರೂ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ತಲೆ, ಭುಜ, ಕಾಲು ಟಚ್ ಮಾಡುತ್ತಾ ಮಾಡುವ ನೃತ್ಯ ಇದಾಗಿದೆ.