ಓವೆಲ್, ಜು 12 (DaijiworldNews/SM): ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಯಾವುದೇ ವಿಕೆಟ್ ನಷ್ಟವಿಲ್ಲದೇ ಗೆಲುವು ಪಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.
111 ರನ್ಗಳ ಟಾರ್ಗೆಟ್ನೊಂದಿಗೆ ಕ್ರೀಸ್ಗೆ ಬಂದ ರೋಹಿತ್ ಹಾಗೂ ಧವನ್ ಜೋಡಿ, ಆಂಗ್ಲರ ಬೌಲರ್ಗಳನ್ನ ಮನಬಂದಂತೆ ದಂಡಿಸಿದರು. ಅದರಲ್ಲೂ ಕ್ಯಾಪ್ಟನ್ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಒಟ್ಟು 58 ಬಾಲ್ಗಳನ್ನ ಎದುರಿಸಿದ ಧವನ್ 5 ಸಿಕ್ಸರ್ ಹಾಗೂ 6 ಬೌಂಡರಿ ಬಾರಿಸಿ ರನ್ಗಳ ಮಳೆಯನ್ನೇ ಸುರಿಸಿದರು. ಒಟ್ಟು 76 ರನ್ಗಳಿಸಿ ತಂಡದ ಗೆಲುವಿಗೆ ಶ್ರಮಿಸಿದರು.
ಹಾಗೆಯೇ ಶಿಖರ್ ಧವನ್ ಕೂಡ ಜವಾಬ್ದಾರಿಯುತ ಆಟವನ್ನ ಪ್ರದರ್ಶಿಸಿದರು. 54 ಬಾಲ್ಗಳನ್ನ ಎದುರಿಸಿ 31ರನ್ಗಳ ಕಾಣಿಕೆ ನೀಡಿದರು. ಕೊನೆಯಲ್ಲಿ ತಂಡದ ಗೆಲುವಿಗೆ ಎರಡು ರನ್ ಬೇಕಿದ್ದಾಗ ಬೌಂಡರಿ ಬಾರಿಸಿ ಗೆಲುವು ತಂದುಕೊಟ್ಟರು.