ರಷ್ಯಾ, ಜು 16 (DaijiworldNews/DB): ರಷ್ಯಾದ ಮಾಜಿ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ತಾಯಿಯಾದ ಸಂಭ್ರಮದಲ್ಲಿದ್ದಾರೆ. ತಾನು ಮೊದಲ ಮಗುವಿಗೆ ಜನ್ಮ ನೀಡಿರುವ ಖುಷಿಯನ್ನು ಮರಿಯಾ ಶರಪೋವಾ ಅವರೇ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ಬರೆದುಕೊಂಡಿದ್ದಾರೆ.
ನಮ್ಮ ಪುಟ್ಟ ಕುಟುಂಬಕ್ಕೆ ಸುಂದರ ಮತ್ತು ಲಾಭದಾಯಕ ಉಡುಗೊರೆ ದೊರಕಿದೆ ಎಂಬ ಶೀರ್ಷಿಕೆಯೊಂದಿಗೆ ಪತಿ ಮತ್ತು ನವಜಾತ ಶಿಶುವಿನೊಂದಿಗಿರುವ ಫೋಟೋವನ್ನು ಶರಪೋವಾ ಹರಿಯಬಿಟ್ಟಿದ್ದಾರೆ. ಜುಲೈ 1ರಂದು ಮುದ್ದು ಕಂದನ ಆಗಮನವಾಗಿದ್ದು, ಮಗುವಿಗೆ ಥಿಯೋಡೋರ್ ಎಂದು ನಾಮಕರಣ ಮಾಡಲಾಗಿದೆ ಎಂದೂ ತಿಳಿಸಿದ್ದಾರೆ.
ಎರಡು ವರ್ಷಗಳ ಡೇಟಿಂಗ್ ಬಳಿಕ 2020ರಲ್ಲಿ ಬ್ರಿಟನ್ನ ಅಲೆಕ್ಸಾಂಡರ್ ಗಿಲ್ಕ್ಸ್ ಅವರನ್ನು ಶರಪೋವಾ ವರಿಸಿದ್ದರು. ಕಳೆದ ಏಪ್ರಿಲ್ನಲ್ಲಿ ತನ್ನ 35ನೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ವೇಳೆ ಮೊದಲ ಮಗುವಿನ ತಾಯಿಯಾಗುವ ನಿರೀಕ್ಷೆಯಲ್ಲಿದ್ದೇನೆ ಎಂದು ಅವರು ಘೋಷಿಸಿಕೊಂಡಿದ್ದರು. ಇದೀಗ ಅವರ ಮಡಿಲಿಗೆ ಮುದ್ದುಕಂದನ ಆಗಮನವಾಗಿದೆ.