ಸಿಂಗಾಪುರ, ಜು 17 (DaijiworldNews/DB): ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಫೈನಲ್ ಪಂದ್ಯದ ಸಿಂಗಾಪುರ ಓಪನ್ ಸೂಪರ್ 500 ಮಹಿಳೆಯರ ಸಿಂಗಲ್ಸ್ನಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಚಾಂಪಿಯನ್ ಆಗುವ ಮೂಲಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಫೈನಲ್ ಪಂದ್ಯದ ಅಂತಿಮ ಸುತ್ತಿನಲ್ಲಿ ಚೀನಾದ ಆಟಗಾರ್ತಿ 22 ವರ್ಷದ ವಾಂಗ್ ಝಿ ಯಿ ಅವರನ್ನು ಸೋಲಿಸುವ ಮೂಲಕ ಪಿ.ವಿ. ಸಿಂಧು ಟ್ರೋಫಿ ಗೆದ್ದರು. ಸಿಂಧು ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದರು. ಅಂತಿಮವಾಗಿ 21-9,11-21,21-15 ಸೆಟ್ಗಳಿಂದ ವಾಂಗ್ ಝಿ ಯಿ ಅವರನ್ನು ಸೋಲಿಸಿದರು.
ಜುಲೈ 28ರಂದು ಬರ್ಮಿಂಗ್ಹಾಮ್ನಲ್ಲಿ ಆರಂಭವಾಗಲಿರುವ ಕಾಮನ್ವೆಲ್ತ್ ಗೇಮ್ಸ್ಗೆ ಸಿಂಧು ತಯಾರಿ ನಡೆಸುತ್ತಿದ್ದು, ಈ ಗೆಲುವು ಕಾಮನ್ವೆಲ್ತ್ ಗೇಮ್ಸ್ಗೆ ಇನ್ನಷ್ಟು ಉತ್ಸಾಹ ತುಂಬಿದೆ.