ಮುಂಬೈ, ಜು 18 (DaijiworldNews/MS): ಭಾರತೀಯ ಒಲಿಂಪಿಕ್ ಸಂಸ್ಥೆಯ (ಐಒಎ) ಮಾಜಿ ಅಧ್ಯಕ್ಷ ನರಿಂದರ್ ಬಾತ್ರಾ ಸೋಮವಾರ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಐಒಎ ಕಾರ್ಯಕಾರಿ ಮಂಡಳಿಗೆ ಬರೆದ ಪತ್ರದಲ್ಲಿ ಬಾತ್ರಾ, "ಆತ್ಮೀಯ ಮಂಡಳಿಯ ಸದಸ್ಯರೇ, ವೈಯಕ್ತಿಕ ಕಾರಣಗಳಿಂದಾಗಿ, ನಾನು 2017 ರಲ್ಲಿ ಆಯ್ಕೆಯಾದ ಅಧ್ಯಕ್ಷ ಸ್ಥಾನಕ್ಕೆ ನನ್ನ ರಾಜೀನಾಮೆಯನ್ನು ಸಲ್ಲಿಸುತ್ತೇನೆ. ನಿಮ್ಮ ಬೆಂಬಲ ಮತ್ತು ಮಾರ್ಗದರ್ಶನಕ್ಕಾಗಿ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ
ಮೂಲಗಳ ಪ್ರಕಾರ, ಹಾಕಿ ಇಂಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತಂಡವು ಐಒಎ ಕಟ್ಟಡದಲ್ಲಿರುವ ಅವರ ಕಚೇರಿಯನ್ನು ಶೋಧಿಸಿದ ನಂತರ ಬಾತ್ರಾ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.