ಬರ್ಮಿಂಗ್ಹ್ಯಾಮ್, ಜು 30 (DaijiworldNews/DB): ಬರ್ಮಿಂಗ್ಹ್ಯಾಮ್ ನೆಲದಲ್ಲಿ 2022ರ ಕಾಮನ್ವೆಲ್ತ್ ಕ್ರೀಡಾಕೂಟ ಅದ್ದೂರಿಯಾಗಿ ಆರಂಭಗೊಂಡಿದೆ. 100ಕ್ಕೂ ಹೆಚ್ಚು ಪದಕ ಗೆಲ್ಲುವ ಗುರಿಯೊಂದಿಗೆ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಈಗಾಗಲೇ ಭಾರತೀಯ ಆಟಗಾರರು ಬರ್ಮಿಂಗ್ಹ್ಯಾಮ್ಗೆ ತೆರಳಿದ್ದಾರೆ.
ಬಹು ನಿರೀಕ್ಷಿತ ಕಾಮನ್ವೆಲ್ತ್ ಕ್ರೀಡಾಕೂಟದ ಮೊದಲ ದಿನವೇ ಭಾರತದ ಮಹತ್ವದ ಸಾಧನೆ ಮಾಡಿ ದೇಶದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದೆ. ಪಾಕಿಸ್ತಾನ ವಿರುದ್ದ ಮೊದಲ ದಿನವಾದ ಶುಕ್ರವಾರ ನಡೆದ ಎಲ್ಲಾ ಕ್ರೀಡೆಯಲ್ಲಿಯೂ ಭಾರತ ಗೆದ್ದು ಬೀಗಿದೆ.
ಮಿಶ್ರ ಡಬಲ್ಸ್ನಲ್ಲಿ ಬಿ. ಸುಮಿತ್ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿಯು 21-9, 21-12ರಿಂದ ಪಾಕ್ ತಂಡದ ಮೊಹಮ್ಮದ್ ಇರ್ಫಾನ್ ಸಯೀದ್ ಭಟ್ಟಿ ಮತ್ತು ಘಜಾಲಾ ಸಿದ್ಧಿಕಿಯವರನ್ನು ಮಣಿಸಿತು.
ಸಿಂಗಲ್ಸ್ನಲ್ಲಿ ಕೆ. ಶ್ರೀಕಾಂತ್ ತ21-7, 21-12ರಿಂದ ಮುರಾದ್ ಅಲಿಯನ್ನು ಸೋಲಿಸಿದರು. ಮಹಿಳೆಯರ ಸಿಂಗಲ್ಸ್ನಲ್ಲಿ ಒಲಿಂಪಿಯನ್ ಪಿ.ವಿ. ಸಿಂಧು 21-7, 21-6ರಿಂದ ಪಾಕ್ ತಂಡದ ಮಹೂರ್ ಶಹಜಾದ್ ವಿರುದ್ಧ ಗೆದ್ದು ಬೀಗಿದರು.
ಭಾರತದ ಪರ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ 37 ಮಂದಿ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.