ಬರ್ಮಿಂಗ್ಹ್ಯಾಮ್, ಆ 02(DaijiworldNews/MS): ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ ವೇಟ್ಲಿಫ್ಟಿಂಗ್ ನಲ್ಲಿ ಭಾರತ ಪದಕ ತನ್ನಾದಾಗಿಸುವ ಗುರಿಯನ್ನು ಮುಂದುವರಿಸಿದೆ.
ಮಹಿಳೆಯರ 71 ಕೆಜಿ ವಿಭಾಗದ ಫೈನಲ್ನಲ್ಲಿ ಭಾರತದ ವೇಟ್ಲಿಫ್ಟರ್ ಹರ್ಜಿಂದರ್ ಕೌರ್ ಒಟ್ಟು 212 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ವೇಟ್ಲಿಫ್ಟಿಂಗ್ ಒಂದರಲ್ಲೇ ಭಾರತಕ್ಕೆ ಒಟ್ಟು 7 ಪದಕಗಳು ಲಭ್ಯವಾಗಿವೆ.
ಸ್ನ್ಯಾಚ್ನಲ್ಲಿ 963 ಕೆ.ಜಿ ಮತ್ತು ಕ್ಲೀನ್ ಅಂಡ್ ಜರ್ಕ್ನಲ್ಲಿ 119 ಕೆ.ಜಿ ಭಾರ ಎತ್ತಿದ ಹರ್ಜಿಂದರ್ ಕೌರ್, ಒಟ್ಟಾರೆ 212 ಕೆ.ಜಿ ತೂಕದ ಮೂಲಕ ಕಂಚಿನ ಪದಕ್ಕೆ ಕೊರಳೊಡ್ಡಿದರು.