ಆ 02 (DaijiworldNews/HR): ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಪದಕ ಸಂಖ್ಯೆ 9ಕ್ಕೇರಿದೆ.
ವಿಜಯ್ ಕುಮಾರ್ ಯಾದವ್ ಅವರು ಕಾಮನ್ವೆಲ್ತ್ ಗೇಮ್ಸ್ 2022ರ ನಾಲ್ಕನೇ ದಿನ ಜುಡೋದಲ್ಲಿ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟಿದ್ದು, ಪುರುಷರ 60 ಕೆಜಿ ಜೂಡೋ ಟೈನಲ್ಲಿ ಸೈಪ್ರಸ್ನ ಪೆಟ್ರೋಸ್ ಕ್ರಿಸ್ಟೋಡೌಲಿಡ್ಸ್ ಅವರನ್ನು ಸೋಲಿಸಿ ಕಂಚಿನ ಪದಕ ಪಡೆದರು.
ಇನ್ನು ಮಹಿಳೆಯರ 48 ಕೆಜಿ ವಿಭಾಗದಲ್ಲಿ ಭಾರತದ ಜೂಡೋ ತಾರೆ ಎಲ್. ಸುಶೀಲಾ ದೇವಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ.
ಒಟ್ಟಾಗಿ ಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ ಭಾರತಕ್ಕೆ ಒಟ್ಟಾರೆ 9 ಪದಕಗಳು ಬಂದಿದ್ದು ಮೂರು ಚಿನ್ನ, ಮೂರು ಬೆಳ್ಳಿ ಹಾಗೂ ಮೂರು ಕಂಚಿನ ಪದಕ ಆಗಿದೆ.