ಬರ್ಮಿಂಗ್ಹ್ಯಾಮ್, ಆ 03 (DaijiworldNews/MS): ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಪುರುಷರ 109 ಕೆಜಿ ವೇಟ್ಲಿಫ್ಟಿಂಗ್ ಫೈನಲ್ನಲ್ಲಿ ಲವ್ಪ್ರೀತ್ ಸಿಂಗ್ 355 ಕೆಜಿಯಷ್ಟು ಎತ್ತುವ ಮೂಲಕ ಕಂಚಿನ ಪದಕವನ್ನು ಗೆದ್ದು ಬೀಗಿದ್ದಾರೆ. ಇದು ಭಾರತಕ್ಕೆ 14ನೇ ಪದಕವಾಗಿದೆ.
ಲವ್ಪ್ರೀತ್ ಅವರಿಗೆ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಮೊದಲ ಪದಕವಾಗಿದೆ. ಆಸ್ಟ್ರೇಲಿಯಾದ ರಾಬರ್ಟ್ಸ್-ಯಂಗ್ 211 ಕೆಜಿ ಭಾರ ಎತ್ತುವಲ್ಲಿ ವಿಫಲರಾದ ಹಿನ್ನಲೆ ಲವ್ ಪ್ರೀತ್ ಗೆ ಪದಕ ಒಲಿದುಬಂತು. ಅವರು ಸ್ನ್ಯಾಚ್ನಲ್ಲಿ 163 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್ನಲ್ಲಿ 192 ಕೆಜಿ ಎತ್ತಿದರು.
2019 ರಲ್ಲಿ ಲವ್ಪ್ರೀತ್ ವೃತ್ತಿಜೀವನದಲ್ಲಿ ದೊಡ್ಡ ಹಿನ್ನಡೆಯನ್ನು ಅನುಭವಿಸಿದ್ದರು. ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಡೋಪ್ ಪರೀಕ್ಷೆಯಲ್ಲಿ ವಿಫಲರಾಗಿದ್ದು ಅವರನು ಚಾಂಪಿಯನ್ಶಿಪ್ನಿಂದ ಅಮಾನತುಗೊಳಿಸಲಾಗಿತ್ತು.