ಬರ್ಮಿಂಗ್ಹ್ಯಾಮ್, ಆ 05 (DaijiworldNews/MS): ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪ್ಯಾರಾ ಕೂಟದಲ್ಲಿ ಪವರ್ ಲಿಫ್ಟಿಂಗ್ನಲ್ಲಿ ಭಾರತದ ಸುಧೀರ್ ಚಿನ್ನ ಗೆದ್ದಿದ್ದು, ಮುರಳಿ ಶ್ರೀಶಂಕರ್, ಪುರುಷರ ಲಾಂಗ್ಜಂಪ್ ಸ್ಪರ್ಧೆಯಲ್ಲಿ ಬೆಳ್ಳಿಪದಕ ಪಡೆದಿದ್ದಾರೆ.
ಹೆವಿವೈಟ್ ಪ್ಯಾರಾ ಪವರ್ಲಿಫ್ಟಿಂಗ್ನಲ್ಲಿ 208 ಕೆಜಿಯನ್ನು ಮೊದಲ ಪ್ರಯತ್ನದಲ್ಲೇ ಎತ್ತಿದರು. ಎರಡನೇ ಪ್ರಯತ್ನದಲ್ಲಿ ಇದನ್ನು 212 ಕೆ.ಜಿ.ಗೆ ಹೆಚ್ಚಿಸಿಕೊಂಡರು. ಈ ಮೂಲಕ 134.5 ಅಂಕಗಳನ್ನು ಗಳಿಸಿ ನೂತನ ಕೂಟ ದಾಖಲೆ ಸ್ಥಾಪಿಸಿದರು.
ಮುರಳಿ ತಮ್ಮ ಐದನೇ ಪ್ರಯತ್ನದಲ್ಲಿ 8.08 ಮೀಟರ್ ದೂರಕ್ಕೆ ಜಿಗಿದು ಬಹಮಸ್ನ ಲಖನ್ ನೈರ್ನ್ ಅವರಿಗಿಂತ ತಾಂತ್ರಿಕವಾಗಿ ಹಿಂದುಳಿದು ಎರಡನೇ ಸ್ಥಾನ ಪಡೆದರು.