ಕೊಲಂಬಿಯಾ, ಆ 06 (DaijiworldNews/DB): ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ ತ್ರಿಪಲ್ ಜಂಪಿಂಗ್ ಸ್ಪರ್ಧೆಯಲ್ಲಿ 20 ವರ್ಷದೊಳಗಿನವರ ವಿಭಾಗದಲ್ಲಿ ಭಾರತದ ಸೆಲ್ವ ಪಿ. ತಿರುಮಾರನ್ ಬೆಳ್ಳಿ ಪದಕ ಗೆದ್ದಿದ್ದಾರೆ.
17 ವರ್ಷದ ಸೆಲ್ವ, 16.15 ಮೀ. ದೂರ ಜಿಗಿದು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು.
ಇನ್ನು ಜಮೈಕಾದ ಹಿಬ್ಬರ್ಟ್ ಅವರು 17.27 ಮೀ. ದೂರ ಜಿಗಿಯುವ ಮೂಲಕ ಚಿನ್ನ, ಎಸ್ಟೋನಿಯಾದ ವಿಕ್ಟರ್ ಮೊರೊಜೊವ್ ಅವರು ಕಂಚು ಗಳಿಸಿದರು.