ಬರ್ಮಿಂಗ್ಹ್ಯಾಮ್, ಆ 06 (DaijiworldNews/DB): ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಮತ್ತೆರಡು ಪದಕ ಲಭಿಸಿದೆ. 3000 ಮೀಟರ್ ಸ್ಟೀಪಲ್ ಚೇಸ್ನಲ್ಲಿ ಅವಿನಾಶ್ ಸೇಬಲ್ ಹಾಗೂ ವೇಗದ ನಡಿಗೆ ಸ್ಪರ್ಧೆಯಲ್ಲಿಪ್ರಿಯಾಂಕಾ ಗೋಸ್ವಾಮಿ ಅವರು ಬೆಳ್ಳಿ ಪದಕ ಜಯಿಸಿದ್ದಾರೆ.
ಕಾಮನ್ವೆಲ್ತ್ ಕ್ರೀಡಾಕೂಟ ಆರಂಭವಾಗಿ ಇಂದು 9ನೇ ದಿನ. ಪ್ರತಿದಿನವೂ ಭಾರತದ ಪಾಲಿಗೆ ಪದಕ ದೊರಕಿದೆ. ಭಾರತದ ಕ್ರೀಡಾಪಟುಗಳ ತಮ್ಮ ಪದಕದ ಭೇಟೆಯನ್ನು ಮುಂದುವರಿಸಿದ್ದು, 3000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಅವಿನಾಶ್ ಸೇಬಲ್ ಅವರು ಬೆಳ್ಳಿ ಪದಕ ಗಳಿಸಿದ್ದಾರೆ.
ಬೆಳ್ಳಿ ಪದಕಕ್ಕೆ ಕೊರಳೊಡ್ಡುವ ಮೂಲಕ ಪ್ರಿಯಾಂಕಾ ಗೋಸ್ವಾಮಿ ಅವರು ಕಾಮನ್ವೆಲ್ತ್ ಗೇಮ್ಸ್ನಲ್ಲಿ ವೇಗದ ನಡಿಗೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದ್ದಾರೆ. 43 ನಿಮಿಷ 38 ಸೆಕೆಂಡ್ಸ್ ನಲ್ಲಿ ಗುರಿ ತಲುಪಿದ ಅವರು ರಜತ ಪದಕ ಗಳಿಸಿದರು. ಆಸ್ಟ್ರೇಲಿಯಾದ ಜೆಮಿಮಾ ಮೊಂಟಾಗ್ ಅವರು 42 ನಿಮಿಷ 34 ಸೆಕೆಂಡ್ಸ್ ನಲ್ಲಿ ಅಂತಿಮ ಗುರಿ ತಲುಪಿ ಚಿನ್ನ ಗಳಿಸಿದರೆ, ಕೀನ್ಯಾದ ವಮುಸ್ಯಿ ಎನ್ ಗಿ ಅವರು ಕಂಚಿನ ಪದಕ ಪಡೆದರು.