ಸಿಡ್ನಿ, ಸೆ 10 (DaijiworldNews/DB): ಏಕದಿನ ಕ್ರಿಕೆಟ್ನಿಂದ ನಿವೃತ್ತಿ ಪಡೆಯುತ್ತಿರುವುದಾಗಿ ಆಸ್ಟ್ರೇಲಿಯಾ ತಂಡದ ನಾಯಕ ಆರನ್ ಫಿಂಚ್ ಅವರು ಘೋಷಿಸಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದ ಬಳಿಕ ಅವರು ಈ ನಿರ್ಧಾರ ಪ್ರಕಟಿಸಿದರು.
35 ವರ್ಷ ವಯಸ್ಸಿನ ಫಿಂಚ್ ಅವರು ಶ್ರೀಲಂಕಾ ವಿರುದ್ದ ಜೂನ್ನಲ್ಲಿ ನಡೆದ ಪಂದ್ಯದಲ್ಲಿ 62 ರನ್ ಗಳಿಸಿದ್ದರು. ಆ ಮೂಲಕ ಕಳಪೆ ಫಾರ್ಮ್ ಕಾಯ್ದುಕೊಂಡಿದ್ದರು. ಇದೀಗ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಮುಂದೆ ಆಡುವುದಿಲ್ಲವೆಂದು ಘೋಷಿಸಿಕೊಂಡಿದ್ದಾರೆ. ಇದುವರೆಗಿನ ಕ್ರಿಕೆಟ್ ಪ್ರಯಾಣ ನನಗೆ ಸಂತೋಷ ತಂದಿದ್ದು, ಹಲವು ಏಕದಿನ ಪಂದ್ಯಗಳಲ್ಲಿ ಆಡಿದ ಖುಷಿ ನನ್ನದಾಗಿದೆ ಎಂದವರು ಇದೇ ವೇಳೆ ತಿಳಿಸಿದ್ದಾರೆ. ಈವರೆಗೆ ಏಕದಿನ ಪಂದ್ಯಗಳಲ್ಲಿ 5,401 ರನ್ ಗಳಿರುವ ಅವರು 17 ಶತಕಗಳನ್ನು ಭಾರಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಮುಂದಿನ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ನಡೆಯುವ ಟಿ-20 ವಿಶ್ವಕಪ್ನಲ್ಲಿ ತಂಡದ ನಾಯಕತ್ವ ಮುಂದುವರಿಸಲಿದ್ದಾರೆ. ವಿಶ್ವಕಪ್ ತಯಾರಿಗೆ ಇದೊಂದು ಅವಕಾಶವಾಗಿದ್ದು, ಈ ಕಾರಣಕ್ಕೆ ವಿಶ್ವದ ಕೆಲವೇ ಕೆಲವು ಆರಂಭಿಕ ಬ್ಯಾಟ್ಸ್ಮನ್ಗಳಲ್ಲಿ ಫಿಂಚ್ ಒಬ್ಬರು.