ದುಬೈ, ಸೆ 12 (DaijiworldNews/HR): ಶ್ರೀಲಂಕಾ ಹಾಗೂ ಪಾಕಿಸ್ತಾನ ನಡುವೆ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಏಷ್ಯಾಕಪ್ 2022 ಫೈನಲ್ ಪಂದ್ಯ ನಡೆದಿದ್ದು, ಈ ವೇಳೆ ಭಾರತದ ಜೆರ್ಸಿ ತೊಟ್ಟು ಬಂದಿದ್ದವರನ್ನು ಪೊಲೀಸರು ತಡೆದಿರುವ ಘಟನೆ ನಡೆದಿದೆ.
ಈ ಕುರಿತು ಟೀಮ್ ಇಂಡಿಯಾದ ಅಧಿಕೃತ ಅಭಿಮಾನಿ ಬಳಗ 'ಭಾರತ್ ಆರ್ಮಿ' ತನ್ನ ಟ್ವಿಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಭಾರತದ ಜೆರ್ಸಿ ತೊಟ್ಟು ಪಾಕಿಸ್ತಾನ ಮತ್ತು ಶ್ರೀಲಂಕಾ ಫೈನಲ್ ಪಂದ್ಯ ನೋಡಲು ನಮಗೆ ಅವಕಾಶ ನೀಡುತ್ತಿಲ್ಲ. ಒಳ ಪ್ರವೇಶಿಸಬೇಕಾದರೆ ಶ್ರೀಲಂಕಾ ಜೆರ್ಸಿ ಅಥವಾ ಪಾಕಿಸ್ತಾನ ಜೆರ್ಸಿ ತೊಡಬೇಕೆಂದು ಆಗ್ರಹಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಇನ್ನು ಪೊಲೀಸರ ಈ ರೀತಿಯ ವರ್ತನೆಗೆ ಅನೇಕ ಭಾರತೀಯರು ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಐಸಿಸಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.