ಮುಂಬೈ, ಸೆ 12 (DaijiworldNews/SM): ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಟೀಂ ಇಂಡಿಯಾ ಆಯ್ಕೆಗೆ ಸಂಬಂಧಿಸಿದಂತೆ ಇಂದು ಮುಂಬೈನಲ್ಲಿ ಭಾರತ ತಂಡದ ಆಯ್ಕೆಗಾರರು ಮಹತ್ವದ ಸಭೆ ನಡೆಸಿದ್ದು, ಬಳಿಕ ತಂಡವನ್ನು ಮೆಗಾ ಈವೆಂಟ್ಗೆ ಆಯ್ಕೆ ಮಾಡಲಾಗಿದೆ.
ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ತಂಡಕ್ಕೆ ಮರಳಿದ್ದಾರೆ, ಅವೇಶ್ ಖಾನ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಶ್ರೇಯಸ್ ಅಯ್ಯರ್ ಮತ್ತು ದೀಪಕ್ ಚಹಾರ್ ಅವರನ್ನು ಸ್ಟ್ಯಾಂಡ್ಬೈಗಳಾಗಿ ತಂಡದಲ್ಲಿ ಸೇರಿಸಲಾಗಿದೆ.
ಟಿ20 ವಿಶ್ವಕಪ್ಗೆ ಭಾರತ ತಂಡ:
ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್(WK),ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ. ಭುವನೇಶ್ವರ್ ಕುಮಾರ್ ಹರ್ಷಲ್ ಪಟೇಲ್, ಹರ್ಷ್ ದೀಪ್ ಸಿಂಗ್ ಆಯ್ಕೆಯಾಗಿದ್ದಾರೆ.
ಸ್ಟ್ಯಾಂಡ್ಬೈ ಪ್ಲೇಯರ್: ಮೊಹಮ್ಮದ್. ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್
15 ಸದಸ್ಯರ ಈ ತಂಡದ ನಾಯಕತ್ವ ರೋಹಿತ್ ಶರ್ಮಾ ಕೈಯಲ್ಲಿದ್ದು, ಕೆಎಲ್ ರಾಹುಲ್ ತಂಡದ ಉಪನಾಯಕರಾಗಿದ್ದಾರೆ. ಏಷ್ಯಾಕಪ್ನಿಂದ ಫಾರ್ಮ್ಗೆ ಮರಳಿರುವ ವಿರಾಟ್ ಕೊಹ್ಲಿ 3ನೇ ಸ್ಥಾನಕ್ಕೆ ಬರಲಿದ್ದು, ಮಧ್ಯಮ ಕ್ರಮಾಂಕವನ್ನು ಬಲಪಡಿಸುವ ಜವಾಬ್ದಾರಿ ಸೂರ್ಯಕುಮಾರ್ ಯಾದವ್ ಅವರ ಹೆಗಲ ಮೇಲಿದೆ. ಈ ಘೋಷಣೆಗೂ ಮುನ್ನ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಗೆ ಅವಕಾಶ ಸಿಗುತ್ತದೋ ಇಲ್ಲವೋ ಎಂಬ ಚರ್ಚೆ ನಡೆದಿದೆ. ಆದರೆ ಆಯ್ಕೆದಾರರು ಅವರ ಮೇಲೆ ನಂಬಿಕೆ ಇಟ್ಟಿದ್ದು, ದಿನೇಶ್ ಕಾರ್ತಿಕ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಆದರೆ, ಈ ಬಾರಿಯೂ ಸಂಜು ಸ್ಯಾಮ್ಸನ್ಗೆ ಅವಕಾಶ ಸಿಗಲಿಲ್ಲ.
ಬೌಲಿಂಗ್ ವಿಭಾಗದಲ್ಲಿ ಭಾರತಕ್ಕೆ ಸಂತಸದ ಸುದ್ದಿಯಿದೆ. ಟೀಂ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದು, ಟಿ20 ಫಾರ್ಮ್ಯಾಟ್ ಸ್ಪೆಷಲಿಸ್ಟ್ ಬೌಲರ್ ಹರ್ಷಲ್ ಪಟೇಲ್ ಕೂಡ ಪುನರಾಗಮನ ಮಾಡುತ್ತಿದ್ದಾರೆ. ಈ ಇಬ್ಬರೂ ಬೌಲರ್ಗಳು ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದರು. ಏಷ್ಯಾಕಪ್ನಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದ ಅರ್ಷದೀಪ್ ಸಿಂಗ್ ಅವರ ಪ್ರದರ್ಶನದ ಫಲ ಸಿಕ್ಕಿದೆ. ಈ ಯುವ ಬೌಲರ್ ತಮ್ಮ ಮೊದಲ ವಿಶ್ವಕಪ್ ಆಡಲು ಆಸ್ಟ್ರೇಲಿಯಾಕ್ಕೆ ಹೋಗಲಿದ್ದಾರೆ. ಇದಲ್ಲದೇ ಭುವನೇಶ್ವರ್ ಕುಮಾರ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಯುಜ್ವೇಂದ್ರ ಚಾಹಲ್, ಆರ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಆಸ್ಟ್ರೇಲಿಯಾದಲ್ಲಿ ಭಾರತದ ಸ್ಪಿನ್ ವಿಭಾಗದ ಪ್ರಮುಖರಾಗಿದ್ದಾರೆ.